ಶಿಗ್ಗಾವಿ: ನಾಡಿನ ಏಳ್ಗೆಗೆಯಲ್ಲಿ ಸಾಕಷ್ಟು ಮಹನಿಯರು ಶ್ರಮಿಸಿದ್ದಾರೆ. ಅವರುಗಳಲ್ಲಿ ರೇಣುಕಾಚಾರ್ಯರೂ ಒಬ್ಬರು. ಅವರ ಆದರ್ಶ ತತ್ವಗಳನ್ನು ಬದುಕಿನಲ್ಲಿ ಪಾಲಿಸಿ. ಕೇತ್ರದಲ್ಲಿನ ಪವಿತ್ರ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಜತೆಗೆ ಅವುಗಳನ್ನು ಪ್ರವಾಸಿ ತಾಣವಾಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಹೇಳಿದರು.

ತಾಲ್ಲೂಕಿನ ಬಂಕಾಪುರ, ಮಣ್ಣೂರ ಗ್ರಾಮಗಳ ಗಡಿಯಲ್ಲಿನ ರೇವಣಶಿದ್ದೇಶ್ವರ ಜಾತ್ರೆ ಅಂಗವಾಗಿ ಈಚೆಗೆ ನಡೆದ ಧರ್ಮ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶರಣರು, ಮಹಾತ್ಮರು ನೀಡಿದ ಸಂದೇಶಗಳನ್ನು ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ. ಅವರುಗಳ ಮಾರ್ಗದಲ್ಲಿ ನಡೆಯುವ ಮೂಲಕ ಬದುಕನ್ನು ಪಾವನ ಮಾಡಿಕೊಳ್ಳಬೇಕು ಎಂದರು.

ಕನಕದಾಸರು ಅಲೆದಾಡಿದ ಗುಡ್ಡದಚನ್ನಾಪುರದಲ್ಲಿ ₹17 ಕೋಟಿ ಅನುದಾನದಲ್ಲಿ ಆದಿಕೇಶವ ಮತ್ತು ಚನ್ನ ಕೇಶವ ದೇವಸ್ಥಾನ ನಿರ್ಮಾಣ ಮಾಡುತ್ತಿದ್ದೇವೆ. ಬಂಕಾಪುರದ ದುರ್ಗಾದೇವಿ ದೇವಸ್ಥಾನಕ್ಕೆ ₹2.60 ಕೋಟಿ ಅನುದಾನದಲ್ಲಿ ದೊಡ್ಡ ದೇವಸ್ಥಾನಕಟ್ಟುತ್ತಿದ್ದೇವೆ. ನನ್ನ ಮುಂದಿನ ಗುರಿ ಈ ಪವಿತ್ರ ಸ್ಥಳವನ್ನು ಅಭಿವೃದ್ಧಿಪಡಿಸುವುದಾಗಿದೆ. ಇದಕ್ಕಾಗಿ ಭೂ ಮಾಲೀಕರ ಮನವಲಿಸಿ ಜಾಗಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಜಿ.ಪಂ ಮಾಜಿ ಸದಸ್ಯ ರಮೇಶದುಗ್ಗತ್ತಿ, ಕೆಸಿಸಿ ಬ್ಯಾಂಕ ಮಾಜಿ ಉಪಾಧ್ಯಕ್ಷ ಶೇಖರಗೌಡ ಪಾಟೀಲ ಮಾತನಾಡಿದರು. ವಿಠ್ಠಲ ಬನ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ ್ಷಗುಡ್ಡಪ್ಪ ಜಲದಿ, ಗ್ರಾ.ಪಂ ಸದಸ್ಯೆ ಪ್ರೇಮಾ ನಂದೀಶಗೌಡ ಪಾಟೀಲ, ಮಲ್ಲನಗೌಡ್ರ ಪಾಟೀಲ, ಪ್ರಕಾಶಗೌಡ್ರ ಪಾಟೀಲ, ಮಾಳಪ್ಪ ಗಡ್ಡೆ, ಮಂಜಪ್ಪ ಹಿರವೆ, ಅಜೀತ ಹಿರೇಕುರಬರ, ಮಂಜಪ್ಪ ಸೂರಣ್ಣವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.