ದೇಶದ ಉಳಿವಿಗೆ ಮೋದಿ ಗೆಲ್ಲಿಸಿ: ರೇವತಿ

ಬುಧವಾರ, ಏಪ್ರಿಲ್ 24, 2019
31 °C

ದೇಶದ ಉಳಿವಿಗೆ ಮೋದಿ ಗೆಲ್ಲಿಸಿ: ರೇವತಿ

Published:
Updated:
Prajavani

ಹಾವೇರಿ: ಕ್ಷೇತ್ರಕ್ಕಾಗಿ ಸಂಸದ ಶಿವಕುಮಾರ ಉದಾಸಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ದೇಶದ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಅವರನ್ನು ಗೆಲ್ಲಿಸಿ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರ ಪತ್ನಿ ರೇವತಿ ಉದಾಸಿ ಮನವಿ ಮಾಡಿದರು.

ಗುರುವಾರ ಬೆಳಿಗ್ಗೆ ಹುಕ್ಕೇರಿಮಠದಲ್ಲಿ ಆಶೀರ್ವಾದ ಪಡೆದ ಬಳಿಕ ನಗರದಲ್ಲಿ ಪ್ರಚಾರ ಕಾರ್ಯಕ್ರಮವನ್ನು ಆರಂಭಿಸಿದರು.

ಹಾವೇರಿ ಕ್ಷೇತ್ರದ ಹಾವೇರಿ–ಗದಗ ವ್ಯಾಪ್ತಿಯಲ್ಲಿ ಉಜ್ವಲ ಯೋಜನೆಯಲ್ಲಿ ಅತಿ ಹೆಚ್ಚು ಅಡುಗೆ ಅನಿಲದ ಸಿಲಿಂಡರ್‌ ವಿತರಿಸಲಾಗಿದೆ. ಅಲ್ಲದೇ, ₹ 43 ಕೋಟಿಯಲ್ಲಿ 11 ರೈಲು ಕೆಳ ಸೇತುವೆ‌, ಅಮೃತ್‌ ಸಿಟಿ ಯೋಜನೆ ಅಡಿ ರಾಣೆಬೆನ್ನೂರು ನಗರಕ್ಕೆ ಉದ್ಯಾನ, ನೀರು ಸರಬರಾಜು ಮಾಡಲಾಗಿದೆ.  ಒಳ ಚರಂಡಿ ವ್ಯವಸ್ಥೆಗೆ ₹ 118 ಕೋಟಿ ಮಂಜೂರಾಗಿದೆ. ಗದಗ ಜಿಲ್ಲೆಯ ಬೆಟಗೇರಿಯೂ ಈ ಯೋಜನೆಗೆ ಒಳಪಟ್ಟಿದೆ ಎಂದರು.

ನಗರದ ಹುಕ್ಕೇರಿಮಠದಲ್ಲಿ ಪೂಜೆ ಸಲ್ಲಿಸಿ ಕಲ್ಲುಮಂಟಪ್ಪ, ಅಕ್ಕಿಪೇಟೆ, ಗಾಂಧಿ ವೃತ್ತ ಹಾಗೂ ಪ್ರಮುಖ ಬೀದಿಗಳಲ್ಲಿ ಪ್ರಚಾರ ನಡೆಸಿದರು. ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಶಾಸಕ ನೆಹರು ಓಲೇಕಾರ, ಮುಖಂಡರಾದ ಗಿರೀಶ ತುಪ್ಪದ, ಜಗದೀಶ ಮಲಗೊಡ, ವಿಜಯಕುಮಾರ ಚಿನ್ನಿಕಟ್ಟಿ, ನಂಜುಂಡೇಶ ಕಳ್ಳೇರ, ಕವಿತಾ ಯಲವಿಗಿಮಠ, ಚೆನ್ನಮ್ಮ ಬ್ಯಾಡಗಿ, ಲಲಿತಾ ಗುಂಡೇನಹಳ್ಳಿ, ರತ್ನಾ ಭೀಮಕ್ಕನವರ, ಅಲ್ಲಾಭಕ್ಷ ತಿಮ್ಮಾಪುರ, ರಾಜು ಶಿವಪುರ, ಪ್ರಭು ಹಿಟ್ನಳ್ಳಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !