ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟ್ವಾದ: ಗೋರಖ್‌ಪುರದಲ್ಲಿ ಸೋಲು, ಫೂಲ್‌ಪುರದಲ್ಲೂ ಸೋಲು

Last Updated 14 ಮಾರ್ಚ್ 2018, 18:46 IST
ಅಕ್ಷರ ಗಾತ್ರ

ಗೋರಖ್‌ಪುರದಲ್ಲಿ ಸೋಲು, ಫೂಲ್‌ಪುರದಲ್ಲೂ ಸೋಲು... ಇನ್ನು ಯೋಗಿ ಆದಿತ್ಯನಾಥ ಅವರು ಕರ್ನಾಟಕ ಮತ್ತು ಕೇರಳದಂತಹ ರಾಜ್ಯಗಳಿಗೆ ಸಲಹೆ ನೀಡುವುದನ್ನು ನಿಲ್ಲಿಸಬೇಕು. ಮೊದಲು ನಿಮ್ಮ ರಾಜ್ಯದಲ್ಲಿ ಆಡಳಿತ ನಡೆಸಿ. ನಂತರ ಬೇರೆ ರಾಜ್ಯಗಳ ಬಗ್ಗೆ ಮಾತನಾಡಿ.

–ಕೆ. ಚಂದ್ರಕುಮಾರ್‌ @kurup62


ಈ ಚುನಾವಣಾ ಫಲಿತಾಂಶದಿಂದ ನಮ್ಮ ಆತ್ಮಸ್ಥೈರ್ಯ ಯಾಕೆ ಕುಗ್ಗಬೇಕು? ವಿರೋಧ ಪಕ್ಷಗಳು ಸಂಭ್ರಮಿಸಲಿ ಬಿಡಿ. 2019ರ ಚುನಾವಣೆಯಲ್ಲಿ ಈ ಕ್ಷೇತ್ರಗಳನ್ನು ವಶಪಡಿಸಿಕೊಳ್ಳಲು ಅವಕಾಶ ಇದ್ದೇ ಇದೆ. ಇತ್ತೀಚೆಗೆ ನೀವು ಈಶಾನ್ಯ ರಾಜ್ಯಗಳಲ್ಲಿ ಗೆದ್ದಿದ್ದೀರಿ. ಸರದಿಯಲ್ಲಿ ಕರ್ನಾಟಕ ಇದೆ. ವಿಶ್ವಾಸ ಕಳೆದುಕೊಳ್ಳಬೇಡಿ; ಆ ಹೊತ್ತಿಗೆ ಹಲವು ವಿಷಯಗಳು ನಿಮಗೆ ಅನುಕೂಲಕರವಾಗಲಿವೆ.

–ಮೇಜರ್‌ ಸುಬ್ರತ್‌ ಮಿಶ್ರಾ ಎಸ್‌.ಎಂ (ನಿವೃತ್ತ) @SubratSMSM

ವಿರೋಧ ಪಕ್ಷಗಳು ರೂಪಿಸುವ ಯೋಜನೆಯಲ್ಲಿ ಮಾಯಾವತಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂಬುದನ್ನು ಉತ್ತರ ಪ್ರದೇಶದ ಉಪಚುನಾವಣೆ ನೆನಪಿಸಿದೆ. ಕರ್ನಾಟಕದಲ್ಲಿ ದೇವೇಗೌಡರಿಗೆ ನೀಡಿರುವ ಬೆಂಬಲದ ಬಗ್ಗೆ ಅವರು ಪರಾಮರ್ಶೆ ನಡೆಸಲಿದ್ದಾರೆಯೇ?– ಯಾಕೆಂದರೆ ಈ ಮೈತ್ರಿಯು ಬಿಜೆಪಿ ವಿರೋಧಿ ಮತಗಳನ್ನು ಒಡೆದು ಬಿಜೆಪಿಗೇ ಅನುಕೂಲ ಕಲ್ಪಿಸಲಿದೆ. 2019ರ ಚುನಾವಣೆಯಲ್ಲಿ ಮಾಯಾವತಿ ‘ಕಿಂಗ್‌/ಕ್ವೀನ್‌ ಮೇಕರ್‌’ ಆಗಿಯೇ ಉಳಿಯಲಿದ್ದಾರೆ. ಅವರು ದೊಡ್ಡ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಸಾಧ್ಯತೆ ಇದೆ.

-ಬರ್ಖಾ ದತ್‌ @BDUTT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT