ಮಂಗಳವಾರ, ಮಾರ್ಚ್ 28, 2023
22 °C

ಸತ್ಕಾರ್ಯದಿಂದ ಜೀವನ ಸಾರ್ಥಕ: ಸದಾಶಿವ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಮನುಷ್ಯ ಸಂಘ ಜೀವಿಯಾಗಿರುವುದರಿಂದ ಜೀವಿತಾವಧಿಯಲ್ಲಿ ಸತ್ಕಾರ್ಯಗಳನ್ನು ಮಾಡಿದರೆ, ಜೀವನ ಸಾರ್ಥಕವಾಗುತ್ತದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ನಗರದ ಶಿವಯೋಗೀಶ್ವರ ನಗರದ ಮುರಿಗೆಪ್ಪ ಕಡೇಕೊಪ್ಪ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರ, ದಯೆ, ಧರ್ಮ, ದಾಸೋಹ ಇವುಗಳು ಶರಣರ ತತ್ವಗಳಲ್ಲಿ ಅಡಕಗೊಂಡಿದ್ದು, ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆಚರಿಸುವುದು ಸಾರ್ಥಕ ಜೀವನದ ಲಕ್ಷಣವಾಗಿದೆ ಎಂದರು.

ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಮನುಷ್ಯ ಹುಟ್ಟಿದಾಗ ಹೆಸರು ಇರುವುದಿಲ್ಲ. ಸಾವಾದಾಗ ಉಸಿರು ಇರುವುದಿಲ್ಲ. ಹುಟ್ಟು ಸಾವಿನ ಮಧ್ಯೆ ಮನುಷ್ಯ ಸದಾಚಾರದಲ್ಲಿ ತೊಡಗಿ ಸಮಾಜಮುಖಿಯಾಗಿ ಬದುಕಿದರೆ, ಜೀವನ ಅರ್ಥಪೂರ್ಣವೆನಿಸುತ್ತದೆ ಎಂದರು. 

ಶಿವಬಸಪ್ಪ ಮುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನಬಸವ ರೊಡ್ಡನವರ ನಿರೂಪಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ವಂದಿಸಿದರು. ಮುರಿಗೆಪ್ಪ ಕಡೇಕೊಪ್ಪ, ಶಿವಯೋಗಿ ಬೆನ್ನೂರ, ಉಳಿವೆಪ್ಪ ಪಂಪಣ್ಣವರ, ನಾಗೇಂದ್ರ ಕಟಕೋಳ, ಎಸ್. ಎಸ್ ಬೇವಿನಮರದ, ಇಂದೂಧರ ಯರೇಸಿಮಿ, ಕೆ.ಎಂ ವಿಜಾಪೂರ, ರಾಜು ಕಡೇಕೊಪ್ಪ, ಬಸವರಾಜ ಕಡೇಕೊಪ್ಪ, ಶಿವಯೋಗಿ ಸಣ್ಣಂಗಿ, ಹಾವೇರಿ ಬಸವಬಳಗದ ಸದಸ್ಯರು ಕಡೇಕೊಪ್ಪ, ಶಿರೂರು, ಕಬ್ಬೂರ ಬಂಧುಗಳು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.