ಸವಣೂರು: ಪಟ್ಟಣದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಸಾಲಿ ದುರ್ಗಾದೇವಿ ಜಾತ್ರೆ ಮಾ.23, 24 ಹಾಗೂ 25ರಂದು ಮೂರು ದಿನಗಳ ಸಂಭ್ರಮದಿಂದ ನಡೆಯಲಿದೆ.

23 ರಂದು ಸೋಮವಾರ ಬೆಳಿಗ್ಗೆ ಶ್ರೀ ಸಾಲಿ ದುರ್ಗಾದೇವಿಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಿಗ್ಗೆ 7 ಘಂಟೆಗೆ ಸಕಲ ವಾದ್ಯ ವೈಭವಗಳೊಂದಿಗೆ ಕುಂಭ ಮೇಳ ಮೆರವಣಿಗೆ ನಂತರ ಮಹಾ ಅನ್ನಪ್ರಸಾದ ಜರಗುವುದು.

ಸಂಜೆ 6ಕ್ಕೆ ಖಾಸಿಂ ಅಲಿ ಸಂಗೀತ ರಸಮಂಜರಿ, ಹಾಸ್ಯ ಮಿಮಿಕ್ರಿ ಗುಡ್ಡಪ್ಪ ಬಾರ್ಕಿ ಹಾಸ್ಯ ಕಾರ್ಯಕ್ರಮ, ರಾಯಲ್ಸ್ ಡ್ಯಾನ್ಸ್ ಆಕಾಡೆಮಿಯಿಂದ ವಿಶೇಷ ನೃತ್ಯ, ಏಕಲವ್ಯ ಮಾರ್ಷಲ್ ಆರ್ಟ್ಸ್ ಸ್ಫೂರ್ಟ್ಸ್ ಕರಾಟೆ ಸಂಘದ ವತಿಯಿಂದ ಕರಾಟೆ ಪ್ರದರ್ಶನ ಕಾರ್ಯಕ್ರಮ ನಡೆಯಲಿವೆ.

24 ರಂದು ದೇವಿಗೆ ಉಡಿತುಂಬುವ ಕಾರ್ಯಕ್ರಮ ನಂತರ ಅನ್ನಪ್ರಸಾದ ಜರಗುವುದು. ಸಂಜೆ 6ಕ್ಕೆ ಸರಿಗಮಪ ಖ್ಯಾತಿಯ ದ್ಯಾಮಣ್ಣ ಕಾರಟಗಿ ಅವರಿಂದ ಸಂಗೀತ ರಸಮಂಜರಿ, ಅಂತರರಾಷ್ಟ್ರೀಯ ಯೋಗ ಪಟು ಹರ್ಷಿತಾ ವಡೇನ ಪುರ ಅವರಿಂದ ಯೋಗ ಪ್ರದರ್ಶನ, ಹಾಸ್ಯ ಕಲಾವಿದ ಕೆ.ಆರ್.ಹಿರೇಮಠ ತಂಡದ ವರಿಂದ ಸಂಗೀತ ಜರುಗಲಿವೆ.

25 ರಂದು ದೇವಿಗೆ ವಿಶೇಷ ಮಹಾಪೂಜೆ ನಂತರ ಮಹಾ ಪ್ರಸಾದ ಜರಗುವುದು ಎಂದು ಸಾಲಿ ದುರ್ಗಾದೇವಿ ಟ್ರಸ್ಟ್ ಕಮಿಟಿ ಪ್ರಕಟಣೆ ಯಲ್ಲಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-22-1110754022

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.