ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಬಿ ಹೂ ನೀಡಿ ಸ್ವಾಗತ

ರಾಣೆಬೆನ್ನೂರು: ಶಾಲಾ ಪ್ರಾರಂಭೋತ್ಸವ
Last Updated 26 ಅಕ್ಟೋಬರ್ 2021, 3:41 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಸಾರ್ವಜನಿಕ ಶಿಕ್ಷಖ ಇಲಾಖೆಯ ನಿರ್ದೇಶನದಂತೆ 1 ರಿಂದ 5 ನೇ ತರಗತಿ ಸೋಮವಾರ ಆರಂಭವಾಗಿದ್ದು, ಮಕ್ಕಳು ಮೊದಲ ದಿನ ಉತ್ಸಾಹದಿಂದ ಶಾಲೆಗೆ ಬಂದರು. ಮಕ್ಕಳ ಕಲವರದ ಕಾರಣ ಶಾಲೆಯಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತ್ತು.

ತಾಲ್ಲೂಕಿನ ಹೆಡಿಯಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಗುಲಾಬಿ ಹೂ ಕೊಟ್ಟು ಸ್ವಾಗತಿಸಲಾಯಿತು. ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಆರ್ ಬಿ. ತೋಟಿಗೇರ ಇದ್ದರು.

ಮುಖ್ಯ ಶಿಕ್ಷಕ ಬಿ.ಪಿ. ಶಿಡೇನೂರ ಮಾತನಾಡಿ, ಕೋವಿಡ್ ನಿಯಮ ಪಾಲನೆ ಮಾಡಿ ತರಗತಿ ನಡೆಸಲಾಗುವುದು ಎಂದರು. ಶಾಲೆ ಪ್ರಾರಂಭವಾಗುವ ಹಿಂದಿನ ದಿನ ಶಾಲಾ ಆವರಣ ಹಾಗೂ ಅಡುಗೆ ಕೋಣೆಯನ್ನು ಸ್ವಚ್ಚಗೊಳಿಸಿ, ತಳಿರು ತೋರಣ ಕಟ್ಟಿ ಶೃಂಗರಿಸಲಾಗಿತ್ತು. ಮಕ್ಕಳಿಗೆ ಸಿಹಿ ಊಟ ಬಡಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಗೋಣೆಪ್ಪ ಅರಳಿ ಅಧ್ಯಕ್ಷತೆ ವಹಿಸಿದ್ದರು. ಮಹೇಶಪ್ಪ ಮಾಸಣಗಿ, ಜಗನ್ನಾಥ ರಾವ್ ಕುಲಕರ್ಣಿ, ಕಾಶಪ್ಪ ಕಮ್ಮಾರ, ಎಫ್.ಪಿ. ನಂದ್ಯಾಲ, ಎಸ್‌.ವಿ ಸುಂಕಾಪುರ, ಎಂ.ಬಿ. ಉಕ್ಕುಂದ, ಸಿ.ಕೆ. ಸಣ್ಣಗೌಡ್ರ ಜ್ಯೋತಿ ಕೆ.ಎಂ, ಎನ್.ಎಸ್. ಕುಸಗೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT