ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಭಾನುವಾರ ಕೇಶವ ದೇವರ ದೇವಸ್ಥಾನ ಉದ್ಘಾಟನೆ ಅಂಗವಾಗಿ ಕೇಶವ ಮತ್ತು ವೀರನರಸಿಂಹ ದೇವರ ಮೂರ್ತಿಗಳ ಶೋಭಾಯಾತ್ರೆ ಭಕ್ತ ಸಮೂಹದ ನಡುವೆ ಸಂಭ್ರಮದಿಂದ ಜರುಗಿತು.

ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಆರಂಭವಾದ ದೇವರ ಮೂರ್ತಿಗಳ ಶೋಭಾಯಾತ್ರೆ ಬ್ರಾಹ್ಮಣ ಓಣಿ, ಕಲಕಟ್ಟಿ ಹನುಮ ದೇವರ ಓಣಿ, ಅರಳಿಕಟ್ಟಿ ಸುತ್ತು ಹಾಕಿ, ಅಂಚೆ ಕಚೇರಿ, ಲಕ್ಷ್ಮೀ ನರಸಿಂಹ ದೇವಸ್ಥಾನ, ಛದುಂಬರ, ಹಳ್ಳಿಕೇರಿ ದೇವಸ್ಥಾನದ ರಸ್ತೆ ಶಿವಭಾರ ವೃತ್ತ ಮೂಲಕ ಕೇಶವ ದೇವರ ದೇವಸ್ಥಾನದವರೆಗೆ ಸಾಗಿತು. ಮೆರವಣಿಗೆಯಲ್ಲಿ ಮಹಿಳೆಯರ ಕುಂಬ ಮೇಳ, ಮಹಿಳೆಯರ ಮಕ್ಕಳು ಹಾಗೂ ಗಣ್ಯರು ವಿಶೇಷ ಸಲ್ಲಿಸಿದರು.

ಮೆರವಣಿಗೆ ಸ್ವಾಗತಕ್ಕಾಗಿ ಪ್ರತಿ ಓಣಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತು. ಬಾಳೆ, ತೆಂಗು ಹಾಗೂ ಮಾವಿನ ಗರಿಗಳಿಂದ ತೋರಣಗಳಿಂದ ಶೃಂಗಾರ ಮಾಡಿದ್ದರು. ಝಾಂಜ ಮೇಳ ಸೇರಿದಂತೆ ವಿವಿಧ ವಾಧ್ಯ ವೈಭವದೊಂದಿಗೆ ಶೋಭಾಯಾತ್ರೆ ಸಂಭ್ರಮದಿಂದ ಸಾಗಿ ಬಂದಿತು.

ಮುಖಂಡರಾದ ಪ್ರಕಾಶ ಪೂಜಾರ, ವಾಸುದೇವ ಕುಲಕರ್ಣಿ, ಯಶವಂತ ಕುಲಕರ್ಣಿ, ರಾಘವೇಂದ್ರ ಕಬ್ಬೂರ, ಕೃಷ್ಣ ಜೋಶಿ, ಆನಂದ ಕುಲಕಣರ್ಿ, ಪಾಂಡುರಂಗ ಪೂಜಾರ, ಕಲ್ಲಪ್ಪ ಗುಳೇದಕೇರಿ, ಮಾಲತೇಶ ಸಕ್ರಿ, ಸುಏಶ ಕುರಗೋಡಿ, ಶ್ರೀಪಾದ ಸಂಕಣ್ಣವರ, ಮಾಲತೇಶ ಪೂಜಾರ, ಚೈತನ್ಯ ಕುಲಕರ್ಣಿ, ರಾಜು ಕುಲಮನಿ, ವಾದಿರಾಜ ದುರ್ಗಾ, ಕೃಷ್ಣ ಕುಲಕರ್ಣಿ, ದತ್ತಾತ್ರೇಯ ಕುಲಕರ್ಣಿ, ಮಂಜುನಾಥ ವಳಗೇರಿ, ರಾಘವೇಂದ್ರ ಕಟ್ಟಿ, ಮಹಿಳಾ ಮಂಡಳ ಸದಸ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-22-582080430

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.