ಶಿಗ್ಗಾವಿ: ‘ತಾಲ್ಲೂಕಿನ ಹೊಸೂರು- ಯತ್ತಿನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಬೇಡಿಕೆ ಮೇರೆಗೆ ದುಂಡಸಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಯತ್ತಿನಹಳ್ಳಿ ಗ್ರಾಮದ ಸುಮಾರು 35 ಎಕರೆ ವಿಸ್ತೀರ್ಣವುಳ್ಳ ಬೆಳ್ಳಿಗಟ್ಟಿ ಕೆರೆಯನ್ನು ಏ. 7ರಿಂದ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು’ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಜಲ ಸಂರಕ್ಷಣೆ, ಅಂತರ್ಜಲ ಬಲವರ್ಧನೆ ಮತ್ತು ರೈತರ ಜಮೀನಿನ ಫಲವತ್ತತೆ ಹೆಚ್ಚಿಸುವ ಉದ್ದೇಶದಿಂದ ನಮ್ಮ ಭಾರತ ಸೇವಾ ಸಂಸ್ಥೆ ಹಲವಾರು ವರ್ಷಗಳಿಂದ ಕೆರೆಗಳ ಅಭಿವೃದ್ಧಿಗೆ ಪಣತೊಟ್ಟಿದೆ. ಹೀಗಾಗಿ ಬೇಡಿಕೆ ಅನುಸಾರ ಇತ್ತೀಚೆಗೆ ತಾಲ್ಲೂಕಿನ ತಡಸ ಗ್ರಾಮದ 14 ಎಕರೆ ವಿಸ್ತೀರ್ಣವಿರುವ ಕಂಚಗಾರಕಟ್ಟಿ ಕೆರೆಯನ್ನು ಉಚಿತವಾಗಿ ಹೂಳು ಎತ್ತುವ ಕಾರ್ಯಕ್ರಮವೂ ಪ್ರಗತಿಯಲ್ಲಿದೆ. ಜತೆಗೆ ಯತ್ತಿನಹಳ್ಳಿ ಗ್ರಾಮದ ಸುಮಾರು 35 ಎಕರೆ ವಿಸ್ತೀರ್ಣವುಳ್ಳ ಬೆಳ್ಳಿಗಟ್ಟಿ ಕೆರೆ ಬೇಡಿಕೆ ಅನುಸಾರ ಹೂಳು ಎತ್ತಲು ಮುಂದಾಗಿದೆ’ ಎಂದರು.

‘ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಭೂಮಿಪೂಜೆ ನೆರವೇರಿಸಿ ಕೆರೆ ಹೂಳು ತೆಗೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-22-1109139625

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.