ಶಿಗ್ಗಾವಿ: ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಪೂರೈಕೆ ಮಾಡುವಲ್ಲಿ ರೈತರಿಗೆ ಎಫ್ಐಡಿಯನ್ನು ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಮೇ 2ರಂದು ಹೆದ್ದಾರಿ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ರೈತ ಒಕ್ಕೂಟ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಬಸಲಿಂಗಪ್ಪ ನರಗುಂದ ಹೇಳಿದರು.

ಪಟ್ಟಣದಲ್ಲಿ ಬುಧವಾರ ನಡೆದ ರೈತರ ಸಭೆ ನೇತೃತ್ವ ವಹಿಸಿ ಮಾತನಾಡಿ, ಎಫ್ಐಡಿ ಕಡ್ಡಾಯದಿಂದ ರೈತರಿಗೆ ಸರಿಯಾದ ವೇಳೆಗೆ ಗೊಬ್ಬರ ಸಿಗುವುದಿಲ್ಲ. ಸರ್ವರ್ ಸಮಸ್ಯೆ ಯಾಗಿ ವಿಳಂಬವಾಗುವ ಭೀತಿ ರೈತರಿಗೆ ಕಾಡುತ್ತದೆ. ರಸಗೊಬ್ಬರ ಮಾರಾಟಗಾರರೂ ರಾಜ್ಯಾದ್ಯಂತ ಇದನ್ನ ವಿರೋಧಿಸಿದ್ದಾರೆ. ವಿತರಿಸಲು ತಾಂತ್ರಿಕ ದೋಷ ಸಂಭವವಿದೆ. ಆದ್ದರಿಂದ ಮೊದಲು ಆಧಾರ್ ಕಾರ್ಡ್ ಮೂಲಕ ವಿತರಿಸುತ್ತಿದ್ದಂತೆಯೇ ಗೊಬ್ಬರವನ್ನು ವಿತರಿಸಬೇಕು. ಒಂದು ವೇಳೆ ಎಫ್ಐಡಿ ಕಡ್ಡಾಯ ನಿಲ್ಲಿಸದೇ ಹೋದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದರು.

ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ ಕಂಕಣವಾಡ ಮಾತನಾಡಿ, ರಸಗೊಬ್ಬರ ಕಂಪನಿಗಳು ಉತ್ಪಾದಿಸಿರುವ ಗೊಬ್ಬರದ ಜೊತೆ ಲಿಂಕ್ ಮೂಲಕ ರೈತರಿಗೆ ನೀಡುತ್ತಿರುವುದರಿಂದ ರೈತರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ ಎಂದರು.

ವಿವಿಧ ರೈತ ಸಂಘಗಳ ಮುಖಂಡರಾದ ನಾಗರಾಜ ದೇಸಾಯಿ, ಗಿರಿಧರಗೌಡ ಪಾಟೀಲ, ಲಕ್ಷ್ಮಣ ಹಂಚಿನಮನಿ, ಈರಣ್ಣ ಸಮಗೊಂಡ, ರಮೇಶ ಜೋಳದ, ನಿಂಗಪ್ಪ ಓಲೇಕಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-22-106694621

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.