ಶಿಗ್ಗಾವಿ: ತಾಲ್ಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಶಾಂತವೀರ ಸ್ವಾಮೀಜಿ ಪುಣ್ಯ ಸ್ಮರಣೆ, ಜಾತ್ರಾ ಮಹೋತ್ಸವ ಹಾಗೂ ಯುಗಾದಿ ಹಬ್ಬದ ಅಂಗವಾಗಿ ಪ್ಯಾಟಿ ಬಸವೇಶ್ವರ ಮಹಾರಥೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು.

ಹೋತನಹಳ್ಳಿ ಸಿಂದಗಿ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಆರಂಭವಾದ ಮಹಾರಥೋತ್ಸವದ ಮೆರವಣಿಗೆಯಲ್ಲಿ ಮಹಿಳೆಯರ ಕುಂಭಮೇಳ, ಝಾಂಜ್ ಮೇಳ, ಡೊಳ್ಳು ಮೇಳ ಸೇರಿದಂತೆ ವಿವಿಧ ವಾದ್ಯವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಹಣ್ಣು ಕಾಯಿಗಳಿಂದ ಮಹಿಳೆಯರು, ಮಕ್ಕಳು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ತಮ್ಮ ಹರಿಕೆ ತೀರಿಸಿ, ಶೃದ್ಧಾ ಭಕ್ತಿ ಮೆರೆದರು.

ಮುಖಂಡರಾದ ಆಸೋಕ ಗುಳೇದಮ ಧರ್ಮಣ್ಣ ಭಂಗಿ, ಪ್ರವೀಣ ಗುಳಣ್ಣವರ, ನಾಗಪ್ಪ ಕೊಡಶೆಟ್ಟರ,ನಾಗಪ್ಪ ಪರಶನವರ, ರುದ್ರಪ್ಪ ಭಂಗಿ, ಚಂದ್ರಪ್ಪ ಬೆಳವತ್ತಿ, ದ್ಯಾಮಣ್ಣ ಸವನೂರ, ಮಾಲತೇಶ ಮೂಡೂರ, ಚಂದ್ರಶೇಖರ ಮೆಟಿಮನಿ, ಬಸನಗೌಡ, ಹನುಮಂತಪ್ಪ ವಿ., ಇತರರು ಇದ್ದರು.

ಸಿದ್ಧೇಶ್ವರ ಸ್ವಾಮಿ ರಥೋತ್ಸವ

ಬ್ಯಾಡಗಿ: ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿರುವ ಪುರಾತನ ಸಿದ್ಧೇಶ್ವರ ಸ್ವಾಮಿ ರಥೋತ್ಸವ ಗುರುವಾರ ಸಂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬೆಳಿಗ್ಗೆ ಕುಮಾರೇಶ್ವರ ಧಾರ್ಮಿಕ ಪಾಠ ಶಾಲೆಯ ವಠುಗಳಿಂದ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿ ವಿಶೇಷ ಪೂಜೆ ನೆರವೇರಿಸಿದರು. ಸಂಜೆ ವಿದ್ಯುತ್ ದೀಪಗಳಿಂದ ಅಲಂಕರಿಸಿದ ರಥೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಬ್ರಾಸ್ ಬ್ಯಾಂಡ್ ಆರ್ಕೆಸ್ಟ್ರಾ ತಂಡದಿಂದ ಮೆರವಣೆಗೆಯುದ್ದಕ್ಕೂ ಸಂಗೀತ ಕಾರ್ಯಕ್ರಮ ನಡೆಯಿತು. ಕೀಲು ಕುದುರೆ ಮತ್ತು ಗೊಂಬೆಗಳ ಕುಣಿತ ವಿಶೇಷ ಗಮನ ಸೆಳೆದವು. ಸಿದ್ಧೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ವಿವೇಕಾನಂದ ಬೆಟಗೇರಿ,ಉಪಾಧ್ಯಕ್ಷ ಕುಮಾರಗೌಡ್ರ ಪಾಟೀಲ, ವರ್ತಕರ ಸಂಘದ ಸದಸ್ಯರು ಇದ್ದರು.

ಯುಗಾದಿ: ಹಿಂದೂ ವರ್ಷಾರಂಭದ ಮೊದಲ ದಿನವಾದ ಗುರುವಾರ (ಪರಾಭವನಾಮ ಸಂವತ್ಸರ) ಯುಗಾದಿ ಹಬ್ಬವನ್ನು ಜನತೆ ಶ್ರದ್ಧಾಭಕ್ತಿಂದ ಆಚರಿಸಿದರು. ಬೆಳಿಗ್ಗೆಯಿಂದಲೇ ಸಿದ್ಧೇಶ್ವರ, ಬನಶಂಕರಿದೇವಿ, ದಾನಮ್ಮದೇವಿ, ಗುತ್ತೆಮ್ಮದೇವಿ, ಗ್ರಾಮದ ದೇವತೆ ದ್ಯಾಮವ್ವದೇವಿ, ಮಾರಿಕಾಂಬಾ ದೇವಿ, ವೀರಭದ್ರೇಶ್ವರ., ಸಂಗಮೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿದರು. ಭಕ್ತರು ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು, ಹಣ್ಣು, ಕಾಯಿ ನೈವೇದ್ಯ ಅರ್ಪಿಸಿ, ಪ್ರಾರ್ಥಿಸಿದರು.

ಸಂಭ್ರಮದ ವೀರಭದ್ರೇಶ್ವರ ಸ್ವಾಮಿ ರಥೋತ್ಸವ

ರಾಣೆಬೆನ್ನೂರು: ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನ ಸಮಿತಿಯಿಂದ ಯುಗಾದಿ ಹಬ್ಬದ ದಿನ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವವು ಗುರುವಾರ ವಿಜೃಂಭಣೆಯಿಂದ ನೆರವೇರಿತು.

ಒಡೆಯರ ಚಿತ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಥೋತ್ಸವವು ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ರಥೋತ್ಸವವು ಮುಕ್ತೇಶ್ವರ ದೇವಸ್ಥಾನದ ಬಳಿ ಇರುವ ವೀರಭದ್ರೇಶ್ವರ ದೇವಸ್ಥಾನಕ್ಕೆ ತಲುಪಿತು. ಭಕ್ತರು ‘ಹರಹರ ಮಹಾದೇವ, ವೀರಭದ್ರೇಶ್ವರ ಮಹಾರಾಜಕೀ ಜೈ’ ಎಂದು ಘೋಷಣೆ ಕೂಗುತ್ತ ತೇರನ್ನು ಎಳೆದರು.

ಅನೇಕರು ತೇರಿಗೆ ಉತ್ಪತ್ತಿ, ಬಾಳೆಹಣ್ಣನ್ನು ಎಸೆದು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರು. ರಥೋತ್ಸವಕ್ಕೆ ಜಾಂಜ್ ಮೇಳ, ಡೊಳ್ಳು, ಸಮ್ನಾಳ, ನಂದಿಕೋಲು ಕುಣಿತ ಸೇರಿದಂತೆ ಸಕಲ ವಾದ್ಯ ಮೇಳಗಳು ಮೆರಗು ನೀಡಿದವು.

ಚೌಡಯ್ಯದಾನಪುರದ ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಗುಗ್ಗಳ ಮಹೋತ್ಸವ: ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನ ಸಮಿತಿಯಿಂದ ಶನಿವಾರ ಬೆಳಿಗ್ಗೆ 7.25 ಕ್ಕೆ ಪಾಲಕಿ ಉತ್ಸವ ಜರುಗುವುದು. ಒಡೆಯರ ಚಿತ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ರಾಣೆಬೆನ್ನೂರಿನ ಬಸವಣ್ಣೆಪ್ಪ ಅಟವಾಳಗಿ ಸಹೋದರರು ಮತ್ತು ಚೌಡಯ್ಯದಾನಪುರದ ಈಶ್ವರ ಪೂಜಾರ, ವಿರೇಶ ಹಾವೇರಿ, ಅಗಡಿಯ ವಿರೇಶ ಬನ್ನಿಕೊಪ್ಪ ಅವರ ವಚನಾಮೃತದೊಂದಿಗೆ ಮಧ್ಯಾಹ್ನ ತುಂಗಭದ್ರಾ ನದಿ ತೀರದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಮುಂದೆ ಅಗ್ನಿ ಕುಂಡ ಹಾಯಲಾಗುವುದು. ನಂತರ ಸಂಜೆ 6 ಗಂಟೆಗೆ ಓಕುಳಿ ಕಾರ್ಯಕ್ರಮ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.