ಶಿಗ್ಗಾವಿ: ಅಧಿಕಾರ, ಅಂತಸ್ತು ಎಂದಿಗೂ ಶಾಶ್ವತವಲ್ಲ, ಜನಮನದಲ್ಲಿ ಮಾಡುವ ಕೆಲಸಗಳು ಉಳಿಯಬೇಕು. ಹೀಗಾಗಿ ಅಧಿಕಾರವಿದ್ದಾಗ ಜನ ಸೇವೆ ಮಾಡಿದರೆ ಸಮಾಜದಲ್ಲಿ ಹೆಸರು ಶಾಶ್ವತವಾಗಿ ರುತ್ತವೆ. ಜನಸೇವೆಗಾಗಿ ಅಧಿಕಾರ ಮೀಸಲು ಇಡುತ್ತೇನೆ ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಹೇಳಿದರು.

ತಾಲ್ಲೂಕಿನಕಿನ ಜೇಕಿನಕಟ್ಟಿ ಗ್ರಾಮ ದಲ್ಲಿ ಕಂದಾಯ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಶನಿವಾರ ನಡೆದ ತಾಲ್ಲೂಕು ಕಂದಾಯ, ಉಪಗ್ರಾಮ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ದಲ್ಲಿ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ 20 ಸಾವಿರ ಪಟ್ಟಾಗಳನ್ನು ಬಡ ಜನಕ್ಕೆ ಕೊಟ್ಟು ಋಣ ಬಾರ ಕಡಿಮೆ ಮಾಡಿಕೊಳ್ಳುತ್ತೇನೆ. ಅದರಿಂದ ಬಡವರಿಗೆ ಆಶ್ರಯ ನೀಡಿದ ತೃಪ್ತಿ ಸಿಗಲಿದೆ. ಸೇವಾ ಭಾವನೆಗಳು ಬದುಕಿನ ಮೌಲ್ಯಗಳನ್ನು ಹೆಚ್ಚಿಸುತ್ತಿವೆ ಎಂದರು.

ಬಡವರ ಹಕ್ಕು ಪತ್ರಕ್ಕೆ ವಿರೋಧ ಪಕ್ಷದವರು ಒಂದು ಹಾಳೆ ಕೊಟ್ಟಿದ್ದಾರೆ ಎಂದು ನಮ್ಮನ್ನು ಟೀಕೆ ಮಾಡುತ್ತಾರೆ. ನಿಮ್ಮ ಅಧಿಕಾರದಲ್ಲಿದ್ದಾಗ ನೀವೇನು ಕೊಟ್ಟಿದ್ದೀರಿ? ಎಂದು ಪ್ರಶ್ನೆ ಮಾಡಿಕೊಳ್ಳಿ ಎಂದು ವಿರೋಧ ಪಕ್ಷದವರ ವಿರುದ್ದ ಹರಿಹಯ್ದರು.

ಕೋಣನಕೇರಿ ಪಂಚಾಯಿತಿ ವ್ಯಾಪ್ತಿ ಒಂದರಲ್ಲಿಯೇ ₹1.20 ಕೋಟಿ ಗೃಹಲಕ್ಷ್ಮಿ ಹಣ ಬರುತ್ತಿದೆ. ರಾಜ್ಯದ ಎಲ್ಲ ಬಡವರಿಗಾಗಿ ಸರ್ಕಾರ ಹಕ್ಕುಪತ್ರ ಕೊಡುವ ಮಹತ್ವದ ಕೆಲಸ ನಮ್ಮದಾಗಿದೆ ಎಂದರು. ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಅಣ್ಣಪ್ಪ ಲಮಾಣಿ, ಮಲ್ಲಮ್ಮ ಸೋಮನಕಟ್ಟಿ, ಮಂಜುನಾಥ ತಿಮ್ಮಾಪೂರ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಫಲಾನುಭವಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-22-1134014423

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.