ಶಿಗ್ಗಾವಿ: ಹಾವೇರಿ ಜಿಲ್ಲೆಯಲ್ಲಿ ‘ಕಲಾವಿದರ ಗ್ರಾಮ’ ಎಂದು ಖ್ಯಾತಿ ಪಡೆದ ಶಿಗ್ಗಾವಿ ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಏಪ್ರಿಲ್ 20, 21 ರಂದು ಎರಡು ದಿನ ಬಸವೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.

ಈ ಸಾರಿ ನೂತನವಾಗಿ ನಿರ್ಮಿಸಿದ ಆಕರ್ಷಕ ರಥೋತ್ಸವದೊಂದಿಗೆ ನಾಲ್ಕು ದಿನ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳು ನಡೆದವು. ಗ್ರಾಮಸ್ಥರಲ್ಲಿ ಆರೋಗ್ಯ ಅರಿವು, ಯೋಗದ ಮಹತ್ವ, ನಾಟಕ, ವಿವಿಧ ಉಪನ್ಯಾಸಗಳು ಜರುಗಿದವು.

ಗ್ರಾಮಸ್ಥರು ಡಿ.ಜೆ ಸಂಗೀತದಂತಹ ಅಪಾಯಕಾರಿ ಕಾರ್ಯಕ್ರಮಗಳ ಉಸಾಬರಿಗೆ ಹೋಗದೇ ಬಸವೇಶ್ವರರ ಕುರಿತು ನಾಟಕ, ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಿ ಸುತ್ತಮುತ್ತಲಿನ ಗ್ರಾಮಗಳಿಗೆ ಮಾದರಿಯಾದರು. ಸಾಮಾಜಿಕ ಸಾಮರಸ್ಯದ ಸಂದೇಶಗಳಿಗೆ ಸಾಕ್ಷಿಯಾದರು.

ರಾಜ್ಯಮಟ್ದದ ಜಾನಪದ ಕಲಾವಿದರಾದ ಮುಗಳಿಯ ಡಾ. ಬಸನಗೌಡ ಪಾಟೀಲ ಅವರ ನೇತೃತ್ವದಲ್ಲಿ ಏಪ್ರಿಲ್ 20 ರಂದು ಜಾನಪದ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ಇವರಿಗೆ ಖ್ಯಾತ ಜಾನಪದ ಕಲಾವಿದರಾದ ಶಿವನಗೌಡ ಪಾಟೀಲ, ಶಂಕ್ರಣ ಸಂಕಣ್ಣವರ ಮತ್ತು ಕಬನೂರಿನ ಅಲ್ಲಿಕೇರಿ ಬಸವೇಶ್ವರ ಸಾಂಸ್ಕೃತಿಕ ಸಂಘ ಸಾಥ್ ನೀಡಿದರು.

ಬಸನಗೌಡ ಪಾಟೀಲ ಹಾಗೂ ಶಿವನಗೌಡ ಪಾಟೀಲ, ಶಂಕ್ರಣ್ಣ ಅವರು ತಮ್ಮ ಅದ್ಭುತ ಕಂಠಸಿರಿಯಿಂದ ಪ್ರೇಕ್ಷಕರನ್ನು ರಂಜಿಸಿದರು. ಬಸನಗೌಡ ಅವರು ಕರ್ನಾಟಕದ ಅಪರೂಪದ ಜಾನಪದ ಗೀತೆಗಳನ್ನು ನೃತ್ಯದೊಂದಿಗೆ ಉತ್ಸಾಹಭರಿತವಾಗಿ ಹಾಡಿದರೆ, ಶಿವನಗೌಡ ಅವರು ಮೈಸೂರು ಭಾಗದ ಅನೇಕ ಜಾನಪದ ಹಾಗೂ ಭಕ್ತಿ ಪ್ರಧಾನ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

ಕಾರ್ಯಕ್ರಮದುದ್ಧಕ್ಕೂ ಗ್ರಾಮೀಣ ಸಂಸ್ಕೃತಿ, ಸಂಸ್ಕಾರ, ಒಕ್ಕುಲುತನ, ಬಾಲ್ಯ, ಜಾನಪದ, ಮಹಿಳಾ ಶಕ್ತಿಯ ಬಗ್ಗೆ ಹಾಡಿನ ಮುಖಾಂತರ, ತತ್ವಪದಗಳ ಮುಖಾಂತರ ಗುಣಗಾನಗಳು ನಡೆದವು. ಇತ್ತೀಚೆಗೆ ಕಣ್ಮರೆಯಾಗುತ್ತಿರುವ ಹಳ್ಳಿಯ ಸುಂದರ ವಾತಾವರಣಗಳ ಬಗ್ಗೆಯೂ ಹಾಡಿನ ಮೂಲಕ ಗ್ರಾಮಸ್ಥರನ್ನು ಎಚ್ಚರಿಸಲಾಯಿತು.

ದೀಪನೃತ್ಯ, ಕನಕನೃತ್ಯ, ಸುಗ್ಗಿಕುಣಿತ, ಜೋಗತಿನೃತ್ಯ, ಹೆಜ್ಜೆಮೇಳ, ತತ್ವಪದಗಳು, ಜಾನಪದನೃತ್ಯ, ಜಾನಪದ ಗೀತೆಗಳಿಗೆ ಝಲಕ್ಕಿಗೆ ಕಲಾವಿದರೊಂದಿಗೆ ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು. ಇದಕ್ಕೆ ಸಾಕ್ಷಿ ಎನ್ನುವಂತೆ ಅಹೋರಾತ್ರಿ ಕಾರ್ಯಕ್ರಮಗಳು ನಡೆದು ಕುರ್ಚಿಗಳು ಜನರಿಂದ ಭರ್ತಿಯಾಗಿದ್ದವು.

ಇನ್ನು, ಕಾರ್ಯಕ್ರಮದಲ್ಲಿ ಇತ್ತೀಚೆಗೆ ‘ಏಷಿಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ’ಯಿಂದ ಗೌರವ ಡಾಕ್ಟರೇಟ್ ಪುರಸ್ಕೃತ ಬಸನಗೌಡ ಪಾಟೀಲ ಅವರನ್ನು ಮುಗಳಿ ಗೆಳೆಯರ ಬಳಗ, ಶಿಷ್ಯ ಬಳಗ, ರೈತ ಬಳಗ ಹಾಗೂ ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.