ಶಿಗ್ಗಾವಿ: ಪಟ್ಟಣದ ಪುರಸಭೆ 2026-27ನೇ ಸಾಲಿನ ₹34.50ಲಕ್ಷ ಉಳಿತಾಯ ಬಜೆಟ್ ಮಂಡಿಸಿದೆ.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಮಂಗಳವಾರ 2026-27ನೇ ಸಾಲಿನ ಬಜೆಟ್ ಮಂಡಿಸಿದ ಉಪವಿಭಾಗಾಧಿಕಾರಿ ಶುಭಂ ಶುಕ್ಲ, ಕುಡಿಯುವ ನೀರು, ರಸ್ತೆ, ಚರಂಡಿಗಳ ನಿರ್ಮಾಣ, ಕೆರೆ, ಉದ್ಯಾನಗಳ ಅಭಿವೃದ್ಧಿ, ಸ್ವಚ್ಚತೆ ಮತ್ತು ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಪ್ರಥಮ ಆದ್ಯತೆ ನೀಡಿ, ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಣೆ ನೀಡಿದರು.

ರಾಜ್ಯ ಹಣಕಾಸು ಆಯೋಗದಿಂದ ಅಂದಾಜು ₹10ಕೋಟಿ ಅನುದಾನ, 16ನೇ ಹಣಕಾಸು ಯೋಜನೆ ಅನುದಾನ ಅಂದಾಜು ₹20ಕೋಟಿ, ವಿಶೇಷ ಅನುದಾನ ₹10ಕೋಟಿ, ವೇತನ ಅನುದಾನ ₹31ಲಕ್ಷ, ಲೈಸನ್ಸ್ ಫೀ ಶುಲ್ಕ ₹8ಲಕ್ಷ, ಸಂತೆ ಶುಲ್ಕ ₹14 ಲಕ್ಷ, ನಲ್ಮೆ, ಡೇ ನಲ್ಮೆ ₹20 ಲಕ್ಷ, ವಿದ್ಯುತ್ ಶಕ್ತಿ ಅನುದಾನ ₹25 ಲಕ್ಷ, ಆಸ್ತಿ ತೆರಿಗೆ ₹14.50ಲಕ್ಷ, ನೀರಿನ ತೆರಿಗೆ ₹6.50ಲಕ್ಷ, ಮಳಿಗೆ ಬಾಡಿಗೆ ₹1.80ಲಕ್ಷ, ಖಾತಾ ಬದಲಾವಣೆ, ಬೋಜಾ, ಉತಾರ ಇತ್ಯಾಧಿಗಳ ಶುಲ್ಕ ₹2.71ಲಕ್ಷ, ಹೊಡಿಕೆಯಿಂದ ಬಂದಿರುವ ಬಡ್ಡಿ ₹22 ಲಕ್ಷ, ಇತರೆ ಯೋಜನೆಗಳಿಂದ ₹6.50ಲಕ್ಷ, ಘನತ್ಯಾಜ್ಯ ವಿಲೇವಾರಿ ಅನುದಾನ ₹10ಕೋಟಿ, ಕಟ್ಟಡ ಪರವಾನಿಗೆ ಹಾಗೂ ಪೂರ್ಣಗೊಂಡ ಶುಲ್ಕ ₹30 ಲಕ್ಷ, ಅಸಾಮಾನ್ಯ ಆದಾಯ ಮತ್ತು ವೆಚ್ಚ ಖಾತೆ ₹2.43ಕೋಟಿ, ಎಸ್.ಎಫ್.ಸಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಅನುದಾನ ₹15ಲಕ್ಷ ಒಟ್ಟು ₹26.32 ಕೋಟಿ ಅಂದಾಜು ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಪ್ರಸಕ್ತ ವರ್ಷಕ್ಕೆ ಖರ್ಚಿನ ಅಂದಾಜು; ಕಟ್ಟಡ ನಿರ್ಮಾಣ ₹20 ಕೋಟಿ, ವಾಹನ ಖರೀದಿ ₹50 ಲಕ್ಷ, ಕೆರೆಗಳ ಮತ್ತು ಉದ್ಯಾನಗಳ ಅಭಿವೃದ್ಧಿ ₹1.50ಕೋಟಿ, ರಸ್ತೆ ನಿರ್ಮಾಣ ₹2.40ಲಕ್ಷ, ಚರಂಡಿಗಳ ನಿರ್ಮಾಣ ₹9.26 ಕೋಟಿ, ಅಭಿವೃದ್ಧಿ ಕಾಮಗಾರಿಗಳು ₹2.20ಕೋಟಿ, ಸಿ.ಡಿ ನಿರ್ಮಾಣ ₹1.20 ಕೋಟಿ, ನೀರು ಸರಬರಾಜು ಸಾಮಗ್ರಿ ಖರೀದಿ ಮತ್ತು ನಿರ್ವಹಣೆ ₹1.50ಕೋಟಿ, ನಲ್ಮೆ ಡೇ ನಲ್ಮೆ ವೆಚ್ಚ ₹20 ಲಕ್ಷ, ಇತರೆ ಯೋಜನೆಗೆ ₹6.50 ಲಕ್ಷ, ಹೊರಗುತ್ತಿಗೆದಾರರ ವೆಚ್ಚ ₹8.50ಲಕ್ಷ, ರಸ್ತೆ, ಚರಂಡಿ, ಸಿಡಿ ಇತ್ಯಾದಿ ನಿರ್ವಹಣಾ ವೆಚ್ಚ ₹56.48ಲಕ್ಷ, ಡಿಜಲ್ ಬಿಲ್ಲ ವೆಚ್ಚ, ವಾಹನಗಳ ನಿರ್ವಹಣೆ ವೆಚ್ಚ ₹30 ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಶೇ29 ಯೋಜನೆ ವೆಚ್ಚ ₹35.51 ಲಕ್ಷ, ಸಾಮಾನ್ಯ ವರ್ಗ ಶೇ7.25 ಯೋಜನೆ ವೆಚ್ಚ ₹8.87ಲಕ್ಷ, ಅಂಗವಿಕಲರ ಶೇ5 ರ ಯೋಜನೆ ವೆಚ್ಚ ₹6.12ಲಕ್ಷ, ಅಸಾಮಾನ್ಯ ಆದಾಯ ಮತ್ತು ವೆಚ್ಚ ಖಾತೆ ₹2.43ಕೋಟಿ, ವೇತನ ಅನುದಾನ ವೆಚ್ಚ ₹3.10ಕೋಟಿ, ವಿದ್ಯುತ್ ಶಕ್ತಿ ಅನುದಾನ ವೆಚ್ಚ ₹2.50ಕೋಟಿ, ಎಸ್.ಎಫ್.ಸಿ ಕುಡಿಯುವ ನೀರಿನ ವೆಚ್ಚ ₹1.50ಕೋಟಿ, ಘನತ್ಯಾಜ್ಯ ವಿಲೇವಾರಿ ವೆಚ್ಚ ₹10ಕೋಟಿ ಸೇರಿದಂತೆ ಒಟ್ಟು ₹ 25.98 ಕೋಟಿ ವೆಚ್ಚವಾಗಲಿದೆ. ₹34.50 ಲಕ್ಷ ಉಳಿತಾಯ ಮಾಡುವ ಗುರಿ ಹೊಂದಲಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಆರ್, ಪುರಸಭೆ ಲೆಕ್ಕಾಧಿಕಾರಿ ರಾಜೇಶ್ ಕಹಾರ್ ಸೇರಿದಂತೆ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-22-1461012251

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.