ಶಿಗ್ಗಾವಿ: ತಾಲ್ಲೂಕಿನ ಚಿಕ್ಕಮಣಕಟ್ಟಿ ಮತ್ತು ಹಿರೇಮಣಕಟ್ಟಿ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಗಾಳಿಮಿಶ್ರಿತ ಮಳೆಗೆ 2-3 ಎಕರೆಯಲ್ಲಿ ಬೆಳೆದಿರುವ ಬದನೆ, ಹಿರೇಕಾಯಿ ತರಕಾರಿ ಬೆಳೆ ಸಂಪೂರ್ಣ ನೆಲಕಚ್ಚಿ ಅಪಾರ ಹಾನಿ ಸಂಭವಿಸಿದ ಘಟನೆ ನಡೆದಿದೆ.

ಹಿರೇಮಣಕಟ್ಟಿ ಗ್ರಾಮದ ರೈತ ಬಸವರಾಜ ಅರ್ಜಪ್ಪ ತಡಿ ಹಾಗೂ ಚಿಕ್ಕಮಣಕಟ್ಟಿ ಗ್ರಾಮದ ಕರಿಸಿದ್ದಪ್ಪ ಕರಡಿ, ಬಸವರಾಜ ಕರಡಿ, ರಾಮಪ್ಪ ಪರಪ್ಪ ಕರಡಿ ಎಂಬುವವರು ತಲಾ ಒಂದೊಂದು ಎಕರೆಯಲ್ಲಿ ಬೆಳೆದಿದ್ದ ಹಿರೇಕಾಯಿ ಬೆಳೆ ನಾಶವಾಗಿದೆ. ಹಿರೇಕಾಯಿ ಹೂ ಬಿಡುವ ಹಂತದಲ್ಲಿತ್ತು, ಆದರೆ ದಿಢೀರ್ ಸುರಿದ ಮಳೆಗೆ ಬೆಳೆ ಸಂಪೂರ್ಣ ಮಣ್ಣು ಪಾಲಾಗಿದೆ ಎಂದು ರೈತ ಬಸವರಾಜ ಕರಡಿ ಅಳಲು ವ್ಯಕ್ತಪಡಿಸಿದರು.

ಜಮೀನಿನಲ್ಲಿ ನೀರು ನುಗ್ಗಿದ್ದರಿಂದ ಅರ್ಧ ಎಕರೆ ಬದನೆಕಾಯಿ ನೀರು ಪಾಲಾಗಿದೆ. ಕಾಯಿ ಬಿಡುತ್ತಿರುವ ಬೆಳೆ ನೀರು ಪಾಲಾಗುತ್ತಿರುವುದನ್ನು ಕಂಡು ಮನಸ್ಸು ಮರುಗಿ ಹೋಗಿದೆ. ಈ ಸಲ ಬದನೆಕಾಯಿ ಬೆಳೆ ನಮ್ಮ ಕೈ ಹಿಡಿಯುತ್ತದೆ ಎಂದು ಇಡೀ ಕುಟುಂಬದ ಸದಸ್ಯರೆಲ್ಲ ಸೇರಿ ರಾತ್ರಿ, ಹಗಲು ಎನ್ನದೆ ದುಡಿದಿದ್ದೇವು. ಆದರೆ ಮಳೆ ಆರ್ಭಟಕ್ಕೆ ಇಡೀ ಬೆಳೆ ನಾಶವಾಗಿದೆ ಎಂದು ರೈತರಾದ ಬಸನಗೌಡ ನಿಂಗನಗೌಡ್ರ, ಬಸಣ್ಣ ಗುಂಜಾಳ ನೊಂದು ನುಡಿದರು.

ಹಾನಿಯಾದ ಸ್ಥಳಕ್ಕೆ ತಹಶೀಲ್ದಾರ್, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಈ ಭಾಗದಲ್ಲಿ ಹಾನಿಯಾದ ತರಕಾರಿ ಬೆಳೆ ರೈತರಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂದು ರೈತ ಮುಖಂಡ ರವಿ ಕಡಕೋಳ ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-22-1468662248

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.