ಶಿಗ್ಗಾವಿ: ದ್ವೇಷದಿಂದ ಸಾಧಿಸಲಾಗದ ಕಾರ್ಯವನ್ನು ಪ್ರೀತಿ, ವಿಶ್ವಾಸದಿಂದ ಸಾಧಿಸಲು ಸಾಧ್ಯವಿದೆ. ದ್ವೇಷ ಮನುಕುಲಕ್ಕೆ ಮಾರಕವಾಗಿದೆ ಎಂಬ ಸತ್ಯಾಂಶವನ್ನು ತಿಳಿಯುವ ಮೂಲಕ ಬದುಕು ಸಾಗಿಸಬೇಕು. ಅಂತಹ ಗುಣಗಳನ್ನು ಬೆಳಸಿಕೊಳ್ಳಲು ಮುಂದಾಗಬೇಕು ಎಂದು ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣವರ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ಶುಕ್ರವಾರ ನಡೆದ ಗೌತಮ ಬುದ್ದನ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಸ್ನೇಹತ್ವ, ಮಮಕಾರದಿಂದ ಮಾತ್ರ ದ್ವೇಷ ಗೆಲ್ಲಲು ಸಾಧ್ಯವಿದೆ. ಪ್ರೀತಿ ಮತ್ತು ಕರುಣೆ ತುಂಬಿದಾಗ ಶಾಂತಿ, ನೆಮ್ಮದಿಯಿಂದ ಜಗತ್ತನ್ನೇ ಗೆಲ್ಲುವ ಸಾಮರ್ಥ ಬರುತ್ತಿದೆ. ಹೀಗಾಗಿ ಪರಸ್ಪರ ಸಹಕಾರ, ಬೆಂಬಲ ಮತ್ತು ಪ್ರತಿಯೊಬ್ಬರಲ್ಲಿ ಸಮಾನತೆ ಭಾವನೆಗಳು ಬೆಳೆಯಬೇಕು. ಅದಕ್ಕೆ ಗೌತಮ ಬುದ್ದನ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಚಲವಾದಿ ಸಮಾಜದ ತಾಲ್ಲೂಕು ಅಧ್ಯಕ್ಷ ಪ್ರಮೋದ ಚಲವಾದಿ, ಯುವ ಪ್ರಶಸ್ತಿ ಪುರಸ್ಕೃತ ಕಲಾವಿದ ಶರೀಫ ಮಾಕಾಪುರ, ಪೀರಸಾಬ ನದಾಫ್, ಅಶೋಕ ಕಾಳೆ, ಶಿವಾನಂದ ಅಂಗಡಿ, ಫಕ್ಕೀರಪ್ಪ ಕುಂದೂರ ಸೇರಿದಂತೆ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-22-473238525

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.