ಶಿಗ್ಗಾವಿ: ಪುರಾತನ ದೇವಸ್ಥಾನಗಳ ಅಭಿವೃದ್ಧಿಪಡಿಸಿ ಮೂಲ ಸಂಸ್ಕೃತಿ, ಸಂಸ್ಕಾರ ಬೆಳೆಸುವ ಕಾರ್ಯ ನಮ್ಮದಾಗಬೇಕು. ಅದಕ್ಕಾಗಿ ಸರ್ಕಾರ ಅನುದಾನ ನೀಡುತ್ತಿದೆ ಎಂದು ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ಶನಿವಾರ ತಾಲ್ಲೂಕು ಆರಾಧನಾ ಸಮಿತಿ ವತಿಯಿಂದ ವಿವಿಧ ದೇವಸ್ಥಾನಗಳ ಅಭಿವೃದ್ಧಿಗೆ ಮಂಜುರಾದ ಅನುದಾನ ಚೆಕ್ ವಿತರಿಸಿ ಮಾತನಾಡಿದರು.

ಕ್ಷೇತ್ರದಲ್ಲಿ 70 ದೇವಸ್ಥಾನಗಳಿಗೆ ₹3.5ಕೋಟಿ ಅನುದಾನ ನೀಡಿದ್ದು, ಪುರಾತನ ದೇವಸ್ಥಾನಗಳ ಪುನರುತ್ಥಾನ ಮಾಡಬೇಕು. ಕಾಂಪೌಂಡ್ ನಿರ್ಮಾಣ, ದ್ವಾರ ಬಾಗಿಲು ನಿರ್ಮಾಣ ಮತ್ತು ಸ್ವಚ್ಚತೆ ಕಾಪಾಡುವ ಕಾರ್ಯಗಳಿಗೆ ಈ ಅನುದಾನ ಬಳಕೆ ಮಾಡಿ. ದೇವಸ್ಥಾನಗಳ ನಿರ್ಮಾಣಕ್ಕೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುತ್ತೇವೆ ಎಂದರು.

ಸರಿಯಾದ ದಾಖಲಾತಿಗಳು ಇಲ್ಲದ ಕಾರಣ ಕೆಲವು ದೇವಸ್ಥಾನಗಳಿಗೆ ಅನುದಾನ ಮಂಜೂರಾಗಿಲ್ಲ. ತಕ್ಷಣ ಅವುಗಳ ದಾಖಲಾತಿ ನೀಡಿ ಅನುದಾನ ಪಡೆಯಬೇಕು. ಪಂಚಾಯತ್ರಾಜ್ ಇಲಾಖೆ, ಆರಾಧನಾ ಸಮಿತಿ, ಮುಜರಾಯಿ ಇಲಾಖೆ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ನೀಡಲಾಗಿದೆ. ಪ್ರಾಮಾಣಿಕವಾಗಿ ಕಾರ್ಯ ಆಗಬೇಕು. ಈಗಾಗಲೆ 40 ಮೈಲಾರಲಿಂಗೇಶ್ವರ ಶಿಬಾರಗಳ ನಿರ್ಮಾಣ ಮಾಡಲಾಗಿದೆ. ಈಗಾಗಲೆ ₹350ಕೋಟಿ ಅನುದಾನ ಕುಡಿಯುವ ನೀರಿಗಾಗಿ ಮಂಜುರಾಗಿದ್ದು, ಸದ್ಯದಲ್ಲಿ ಕಾಮಗಾರಿ ಆರಂಭಿಸುತ್ತೇವೆಎಂದರು.

ಸಾಮಾನ್ಯ ಶಾಸಕರಾಗಿ ಇಷ್ಟೊಂದು ಅನುದಾನ ಹೇಗೆ ಬಿಡುಗಡೆ ಆಗುತ್ತಿದೆ ಎಂಬುವುದು ವಿರೋಧ ಪಕ್ಷದವರಲ್ಲಿ ಕಾಡುತ್ತಿದೆ. ಕೆಲವುರು ಸಾಮಾಜಿಕ ಜಾಲ ತಾಣಗಳಲ್ಲಿ ಅಪಪ್ರಜಾರ ಮಾಡುತ್ತಿದ್ದಾರೆ. ಅವರಿಗೆ ಕ್ಷೇತ್ರದ ಜನ ಉತ್ತರಿಸಲಿದ್ದಾರೆ ಎಂದರು.

ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣವರ, ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ಎಸ್.ಎಫ.ಮಣಕಟ್ಟಿ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಸವಣೂರ ತಾಲ್ಲೂಕು ಅಧ್ಯಕ್ಷ ಜೆ.ಎಂ.ಮುಲ್ಲಾ, ಪುರಸಭೆ ಸದಸ್ಯೆ ವಸಂತಾ ಬಾಗೂರ, ಮುಖಂಡ ಈಶ್ವರಗೌಡ ಪಾಟೀಲ, ಬಸವರಾಜ ರಾಗಿ, ಎಸ್.ವಿ.ಪಾಟೀಲ, ಚಂದ್ರಣ್ಣ ಕೊಡ್ಲಿವಾಡ, ಅಣ್ಣಪ್ಪ ಲಮಾಣಿ, ಸುಧೀರ ಲಮಾಣಿ ಸೇರಿದಂತೆ ಅನೇಕ ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-22-628321710

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.