ಶಿಗ್ಗಾವಿ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟ ಗ್ರಾಮದ ಪರಿಶಿಷ್ಟ ಜಾತಿ ಯುವಕ ರವಿಚಂದ್ರ ದೇವಪ್ಪ ಮಾದರ ಅವರ ಅಮಾನುಷ ಕೊಲೆ ಖಂಡಿಸಿ ತಕ್ಷಣ ಆರೋಪಿತರನ್ನು ಬಂಧಿಸುವಂತೆ ಒತ್ತಾಯಿಸಿ ಶನಿವಾರ ಶಿಗ್ಗಾವಿಯಲ್ಲಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ತಾಲ್ಲೂಕು ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಶಿರಸ್ತೆದಾರ ಸುರೇಶ ಬೋಳಣ್ಣವರ ಅವರಿಗೆ ಮನವಿ ಸಲ್ಲಿಸಿದರು.

ರವಿಚಂದ್ರ ಮಾದರ ಅವರು ಎನ್.ಎಸ್. ಪೂಜಾರಿಯವರ ಕಂಪನಿಯಲ್ಲಿ 4 ವರ್ಷದಿಂದ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಏಕಾಏಕಿ ಹಂಗರಗಿ ಗ್ರಾಮದ ಕ್ರಾಸ್ ಬಳಿ ಮರಕ್ಕೆ ನೇಣು ಬಿಗಿದ ನೇತಾಡುತ್ತಿರುವ ಸ್ಥಿತಿಯಲ್ಲಿ ಕಂಡಿದೆ. ರವಿಚಂದ್ರ ಅವರ ತಂದೆ ಇದು ಆತ್ಮಹತ್ಯೆ ಅಲ್ಲ. ಖಂಡಿತವಾಗಿ ಇದು ಕೊಲೆ ಎಂದು 15 ಜನರ ಮೇಲೆ ಬಸವನ ಬಾಗೇವಾಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಕೊಲೆಯ ಬಗ್ಗೆ ದೂರು ನೀಡಿ 3 ದಿವಸ ಕಳೆದರೂ ಆರೋಪಿತರನ್ನು ಬಂಧನಗೊಳಿಸದೇ ಪೊಲೀಸರು ಮತ್ತೊಂದು ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ಇಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ಲಕ್ಷ್ಯತೆ ಕಾಣುತ್ತಿದೆ. ರಾಜ್ಯದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸಮುದಾಯದ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇಂತಹ ಘಟನೆಗಳು ಮರುಕಳುಹಿಸದಂತೆ ರಕ್ಷಣೆ ನೀಡಬೇಕು. ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ದಲಿತ ವಿಮೋಚನಾ ಸಮಿತಿ ಅಧ್ಯಕ್ಷ ಮಂಜುನಾಥ ಬಾಲಪ್ಪನವರ, ಅರುಣ ನಡುವಿನಮನಿ, ಫಕ್ಕೀರೇಶ ಹರಿಜನ, ಬಸವರಾಜ ಕಟ್ಟಿಮನಿ, ದೇವರಾಜ ಹರಿಜನ, ಅಭಿಷೇಕ ಹರಿಜನ, ನಗರಾಜ ನಡುವಿನಮನಿ, ಅವಿನಾಶ ಬಾಲಪ್ಪನವರ, ಸಂತೋಷ ಮಾದರ. ಮಂಜುನಾಥ ಪೂಜಾರ, ರವಿ ಮಾದರ, ಆಕಾಶ ಲಮಾಣಿ, ಶಿವಾನಂದ ದೊಡ್ಡಮನಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-22-1510626538

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.