ಶಿಗ್ಗಾವಿ: ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್, ಗಣಿತ ವಿಷಯಗಳ ಜ್ಞಾನ ಹೆಚ್ಚಿಸಿಕೊಳ್ಳುವ ಜತೆಗೆ ಆಯಾ ಉದ್ಯೋಗಗಳಿಗೆ ತಕ್ಕಂತೆ ಕೌಶಲ ವೃದ್ಧಿ ಮಾಡಿಕೊಳ್ಳುವುದು ಅವಶ್ಯವಾಗಿದೆ. ಅದರಿಂದ ತಾವು ಬಯಸಿದ ಕಂಪನಿಯಲ್ಲಿ ಉದ್ಯೋಗ ಪಡೆಯಲು ಸಾಧ್ಯವಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪಟ್ಟಣದಲ್ಲಿ ಗಂಗಮ್ಮ ಎಸ್.ಬೊಮ್ಮಾಯಿ ಟ್ರಸ್ಟ್, ಸೋಮಪ್ಪ ಆರ್.ಬೊಮ್ಮಾಯಿ ಟ್ರಸ್ಟ್ ವತಿಯಿಂದ ಶಿಗ್ಗಾವಿ-ಸವಣೂರ ತಾಲ್ಲೂಕಿನ ನಿರುದ್ಯೋಗ ಯುವಕರಿಗೆ ಶುಕ್ರವಾರ ನಡೆದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ಕೊಟ್ಟರೆ ಅವರು ದೇಶದ ಭವಿಷ್ಯವನ್ನು ಉಜ್ವಲವಾಗಿ ಬರೆಯುತ್ತಾರೆ. ಆರೋಗ್ಯ, ಶಿಕ್ಷಣದ ಜೊತೆಗೆ ಉದ್ಯೋಗ ಬಹಳ ಮುಖ್ಯ. ಕುಟುಂಬದಲ್ಲಿ ಒಬ್ಬರು ಉದ್ಯೋಗದಲ್ಲಿದ್ದರೆ ಒಂದು ಕುಟುಂಬ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವುದು ಬಹಳ ಅವಶ್ಯ ಇದೆ.

‘ನಾನು ಸಂಸತ್ತಿನಲ್ಲಿ ಕಾರ್ಮಿಕ, ಉದ್ಯೋಗ, ಜವಳಿ, ಕೌಶಲ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷನಿದ್ದೇನೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಕೌಶಲ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದರು. ಅವರು ಪ್ರಧಾನಿಯಾಗಿ ಕೌಶಲ ಅಭಿವೃದ್ಧಿಗೆ ಒಂದು ಪತ್ಯೇಕ ಇಲಾಖೆ ಮಾಡಿದ್ದಾರೆ. ಇದರಿಂದ ಕರ್ನಾಟಕಕ್ಕೆ ಪ್ರತಿವರ್ಷ ಸುಮಾರು ₹400 ಕೋಟಿಗಿಂತಲೂ ಹೆಚ್ಚಿನ ಹಣ ವೆಚ್ಚವಾಗುತ್ತದೆ. ಅದಕ್ಕೆ ಸಾಂಸ್ಥಿಕ ರೂಪ ಕೊಡಬೇಕೆಂದು ನಾವು ಶಿಫಾರಸು ಮಾಡಿದ್ದೇವೆ’ ಎಂದರು.

‘ಕ್ಷೇತ್ರದಲ್ಲಿ ಐಟಿಐ, ಡಿಪ್ಲೋಮಾ, ಮಹಿಳಾ ಐಟಿಐ ಇವೆ. ಇವುಗಳಲ್ಲಿ ಅಲ್ಪಾವಧಿ ಕೌಶಲ ತರಬೇತಿ ಕೋರ್ಸ್ ಮಾಡಬೇಕೆಂಬ ಬಯಕೆ ಇದೆ. ಕೌಶಲ ಪಡೆದವರಿಗೆ ನೇರವಾಗಿ ನೌಕರಿಗೆ ಸೇರಲು ಅವಕಾಶ ಕಲ್ಪಿಸುವಂತಾಗಬೇಕು. ಇದನ್ನು ನಮ್ಮ ಸರ್ಕಾರಿ ಕಾಲೇಜುಗಳಲ್ಲಿ ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಇದು ನಮ್ಮ ಪಧಾನಿಗಳು ನಮಗೆ ಕೊಟ್ಟಿರುವ ಆದೇಶ. ನಮ್ಮ ಸಮಿತಿ ಆದಷ್ಟು ಬೇಗ ಹಾವೇರಿಗೆ ಬರುತ್ತದೆ. ಇಲ್ಲಿ 8 ಟೆಕ್ಸ್ಟೈಲ್ ಪಾರ್ಕ್ ಮಾಡಲಾಗುತ್ತಿದೆ. ಹಾವೇರಿ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಜಮೀನು ನೀಡಿದರೆ ಆದಷ್ಟು ಬೇಗ ಹಾವೇರಿ ಟೆಕ್ಸ್ಟೈಲ್ ಪಾರ್ಕ್ ಮಾಡಲು ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

‘ಶಿಗ್ಗಾವಿಯಲ್ಲಿ 20 ಸಾವಿರ ಜನರಿಗೆ ಉದ್ಯೋಗ ಕೊಡಬೇಕೆಂದು 15 ಸಾವಿರ ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡಬೇಕೆಂದು 50 ಎಕರೆ ಜಮೀನು ಕೊಟ್ಟು ಒಂದು ಆಂಕರ್ ಇಂಡಸ್ಟ್ರೀ ಇಲ್ಲಿ ಆರಂಭವಾಗಿದೆ. ಇಲ್ಲಿ ತಯಾರಾಗುವ ಬಟ್ಟೆಗಳು ಅಮೆರಿಕಕ್ಕೆ ಹೋಗುತ್ತವೆ. ಸಾಯಿ ಗಾರ್ಮೆಂಟ್ಸ್ನಲ್ಲಿ ತಯಾರಾಗುವ ಬಟ್ಟೆಗಳು ಜಪಾನ್ಗೆ ಕಳುಹಿಸುತ್ತಾರೆ. ಕಾಣಲಾರದ ಕನಸು ನನಸಾಗಿದೆ’ ಎಂದರು.

‘ರಾಜಕಾರಣ ಮಾಡುವುದು ಬೇರೆ. ನಮ್ಮ ಮಕ್ಕಳು, ಹೆಣ್ಣು ಮಕ್ಕಳಿಗೆ ಒಳ್ಳೆಯ ಭವಿಷ್ಯ ಕೊಡಬೇಕು ಅಂದರೆ ಅದು ಬಹಳ ದೊಡ್ಡ ಪುಣ್ಯ ಯಶಸ್ಸು ನಿರಂತರ ನಡೆಯುತ್ತದೆ. ಸೋಲು ಅಂತ್ಯವಲ್ಲ. ಯಶಸ್ಸು ಶಾಶ್ವತ ಅಲ್ಲ. ಸೋಲು ಮತ್ತು ಗೆಲುವಿನ ನಡುವೆ ಸ್ಥಿತ ಪಜ್ಞೆ ಇಟ್ಟುಕೊಂಡು ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎನ್ನುವ ಇಚ್ಚಾಶಕ್ತಿ ಇದ್ದರೆ ಅದಕ್ಕಿಂತ ದೊಡ್ಡ ಸಂತೋಷ ಇನ್ನೊಂದಿಲ್ಲ. ಮತ ಹಾಕದಿದ್ದರೂ ಅವರ ಸೇವೆ ಮಾಡಿ ವಿಶ್ವಾಸ ಗಳಿಸಿದರೆ ಜನನಾಯಕರಾಗುತ್ತೀರಿ. ಸೋಲು ಗೆಲುವು ಮಿರಿ ಸೇವೆ ಮಾಡುವ ಮನೋಭಾವನೆ ಇವತ್ತಿನ ಸಮ್ಮೇಳನವಾಗಿದೆ. ಇದು ನಿರಂತರವಾಗಿ ನಡೆಯಬೇಕು. ಸುಮಾರು 2 ಸಾವಿರ ಜನರಿಗೆ ಉದ್ಯೋಗ ಕೊಡಬೇಕು ಎಂದು ನಿರ್ಧಾರ ಮಾಡಿದ್ದಾರೆ. ಅಷ್ಟು ಜನರಿಗೆ ನೀಡಲು ಆಗಿಲ್ಲ. ಕನಿಷ್ಠ ನಾಲ್ಕು ತಿಂಗಳಿಗೊಮ್ಮೆ ಉದ್ಯೋಗ ಮೇಳ ಮಾಡಬೇಕು’ ಎಂದರು.

ಬಿಜೆಪಿ ಮುಖಂಡ ಭರತ ಬೊಮ್ಮಾಯಿ ಮಾತನಾಡಿ, ‘ಊರು ಬಿಟ್ಟವರು ಉದ್ದಾರ ಆಗುತ್ತಾರೆ ಎಂಬುದಕ್ಕೆ ನಾನೇ ಸಾಕ್ಷಿ, ಅಮೆರಿಕ, ಸಿಂಗಪುರ ದೇಶಗಳಿಗೆ ಹೋಗಿ ಉದ್ಯೋಗದ ತರಬೇತಿ ಪಡೆದಿದ್ದೇನೆ. ರೊಟ್ಟಿ ಬಿಟ್ಟು ಎಲ್ಲ ತರಹದ ಅಡುಗೆ ಮಾಡಲು ಕಲಿತ್ತಿದ್ದೇನೆ. ಬಡತನದಲ್ಲಿ ನೋವು ಏನು ಎಂಬುವುದನ್ನು ಸ್ವತಃ ಅರಿತಿದ್ದೇನೆ. ಜನ್ಮ ದಿನದ ಅಂಗವಾಗಿ 85 ಎಕರೆಯಲ್ಲಿ ಉಚಿತ ದ್ರೋಣ ಬಳಕೆ ಮಾಡಿ ರೈತರಿಗೆ ನೆರವಾಗಿದ್ದೇವೆ. ಉದ್ಯೋಗ ಮೇಳ ಮಾಡಿ ಯುವಕರಿಗೆ ನೆರವಾಗುವ ಉದ್ದೇಶ ನಮ್ಮದಾಗಿದೆ. ಸಾವಿರ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ನೋಂದಣಿ ಮಾಡಿದ್ದಾರೆ. ಅದರಲ್ಲಿ 350 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. ಉಳಿದ ಅಭ್ಯರ್ಥಿಗಳಿಗೂ ಸಹ ಪರಿಶೀಲಿಸಿ ನೇಮಕ ಮಾಡಿಕೊಳ್ಳಲಾಗುವುದು’ ಎಂದರು.

ಮುಖಂಡ ನವೀನ್ ಸವಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಗ್ಗಾವಿ ಮಂಡಳದ ಅಧ್ಯಕ್ಷ ಈಶ್ವರ ಹರವಿ, ಸವಣೂರ ಮಂಡಳದ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ಬಿ.ಜೆ.ಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಗಂಗಾಧರ ಬಾಣದ, ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ಕಂಪನಿಯ ಆಯೋಜಕ ಶ್ರೀನಿವಾಸ ಟಿ.ಎನ್, ಕೌಶಿಕ ರಾಜು, ಕೆ.ಎಂ.ಎಫ್ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ, ಜಿ.ಟಿ.ಟಿ.ಸಿ ಪ್ರಾಚಾರ್ಯ ಸಂತೋಷಕುಮಾರ, ಮುಖಂಡರಾದ ಎಂ.ಎನ್ ಹೊನಕೇರಿ, ಧರೆಪ್ಪಗೌಡ ಪಾಟೀಲ್, ಶಂಕರಗೌಡ ಪೋಲಿಸಗೌಡ್ರ, ಶೋಭಾ ನಿಸ್ಸಿಮಗೌಡ್ರ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಕಂಪನಿಗಳ ಮುಖ್ಯಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-22-247714597

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.