ಶಿಗ್ಗಾವಿ: ‘ಆರ್ಥಿಕ ಸ್ವಾವಲಂಬಗೆ ಸಾಮೂಹಿಕ ವಿವಾಹಗಳು ಸಹಕಾರಿಯಾಗಿವೆ. ಅದರಿಂದ ಬಡತನ ದೂರಾಗಲು ಸಾಧ್ಯವಿದೆ’ ಎಂದು ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಿರೇಬೆಂಡಿಗೇರಿ ಗ್ರಾಮದ ಹಿರೇಮಠದಲ್ಲಿ ಗುರುವಾರ ನಡೆದ 17ನೇ ವರ್ಷದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ವಿವಿಧ ಜಾತಿ ಮತ್ತು ಸಮುದಾಯದವರು ಒಂದೇ ವೇದಿಕೆಯಲ್ಲಿ ಮದುವೆಯಾಗುವುದರಿಂದ ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆ ಮೂಡುತ್ತದೆ’ ಎಂದರು.

ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ‘ಸಾಮೂಹಿಕ ವಿವಾಹದಲ್ಲಿ ಮೇಲು, ಕೀಳು ಎಂಬುದು ಇಲ್ಲ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಡುವ ವಿವಾಹಗಳಿಗೆ ಕಡಿವಾಣ ಹಾಕಲಾಗಿದೆ’ ಎಂದರು.

ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಗಣ್ಣ ಸಾತಣ್ಣವರ, ಮುಖಂಡ ಶಿವಾನಂದ ಮ್ಯಾಗೇರಿ ಮಾತನಾಡಿದರು. ಗಂಜೀಗಟ್ಟಿ ಶಿವಲಿಂಗೇಶ್ವರ ಶಿವಾಚಾರ್ಯರು ಸ್ವಾಮೀಜಿ, ಅಸೂಟಿಯ ರೇವಣಶಿದ್ದೇಶ್ವರ ಸ್ವಾಮೀಜಿ, ಹಿರೆಂಬೇಂಡಿಗೇರಿ ಹಿರೇಮಠದ ವಿಶ್ವೇಶ್ವರ ಶಿವಾಚಾರ್ಯರು ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖಂಡರಾದ ಮೌಲಾಸಾಬ್ ತಹಶೀಲ್ದಾರ್ ಹಾಗೂ ಶಿವಾನಂದ ಮ್ಯಾಗೇರಿ ನೇತೃತ್ವ ವಹಿಸಿದ್ದರು.

ಸಾಮೂಹಿಕ ವಿವಾಹದಲ್ಲಿ 10 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮುಖಂಡರಾದ ಗುರುನಾಥ ಅಂಚಟಗೇರಿ, ಮೃತ್ಯಂಜಯ ವಡಯರಮಠ, ಅರ್ಜುನ ಹಂಚಿನಮನಿ, ಮಂಜುನಾಥ ಕಾರಡಗಿ, ಮಹೇಶ ಹಿರೇಮಠ, ಎಂ ಎಚ್ ಪಠಾಣ್, ಫಕ್ಕೀರಪ್ಪ ಸಂಗಣ್ಣವರ, ಧರಯಪ್ಪಗೌಡ್ರ ಪಾಟೀಲ, ವಿಶ್ವನಾಥ ಹರಕುಣಿ, ರಮೇಶ ಸಾತಣ್ಣವರ, ಫಯಾಜ್ ಸವಣೂರ ಸೇರಿದಂತೆ ಹಿರೆಬೆಂಡಿಗೇರಿ ಸುತ್ತಲಿನ ಗ್ರಾಮದ ಮುಖಂಡರು, ಸಾರ್ವಜನಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.