ಶಿಗ್ಗಾವಿ: ಆರ್ಥಿಕ ಏಳ್ಗೆಗೆ ಸಾಮೂಹಿಕ ವಿವಾಹಗಳು ಸಹಕಾರಿಯಾಗಿದ್ದು, ಅದರಿಂದ ಬಡತನ ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದು ಗಂಜಿಗಟ್ಟಿ ಚರಮುರ್ತೆಶ್ವರ ಮಠದ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು,

ತಾಲ್ಲೂಕಿನ ಬನ್ನೂರ ಗ್ರಾಮದಲ್ಲಿ ಇತ್ತೀಚಿಗೆ ಭಾರತ ಸೇವಾ ಸಂಸ್ಥೆ ವತಿಯಿಂದ 12ನೇ ವರ್ಷದ 5ಜೋಡಿ ದಂಪತಿಗಳ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಎಲ್ಲ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮದೇ ಆದ ಸಂಸ್ಥೆ ಮೂಲಕ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು ತಮ್ಮ ಕಾರ್ಯ ಶ್ಲಾಘನಿಯ ಎಂದರು.

ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಸಾಮೂಹಿಕ ವಿವಾಹಗಳು ಸಾಮಾಜಿಕ ಸಮಾನತೆ ಸಾರುತ್ತವೆ.ಸಾಮೂಹಿಕ ವಿವಾಹವು ಅನೇಕ ಜೋಡಿಗಳು ಒಂದೇ ಸಮಯದಲ್ಲಿ, ಒಂದೇ ಸ್ಥಳದಲ್ಲಿ ಸರಳವಾಗಿ ಮದುವೆಯಾಗುವ ಆರ್ಥಿಕ ಮತ್ತು ಸಾಮಾಜಿಕ ಕಾರ್ಯಕ್ರಮವಾಗಿದೆ. ಇದು ಆಡಂಬರ ಮತ್ತು ದುಂದುವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು.

ಅರಳೆಲೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಶದ ಹೆಸರಿನಲ್ಲಿ ಸಂಸ್ಥೆಗೆ ಕಟ್ಟಿಕೊಂಡು ಎಲ್ಲ ವರ್ಗಗಳ ಜನರಿಗೆ ತಮ್ಮ ದುಡಿಮೆ ಹಣದಲ್ಲಿ ಸಮಾಜ ಸೇವೆಯನ್ನು ಮಾಡಿಕೊಂಡು ಬಂದಿರುವುದು ಹೆಮ್ಮೆ ಕಾರ್ಯ ನಿಮ್ಮ ಸಮಾಜ ಸೇವೆ ನಿರಂತರವಾಗಿರಲಿ ಎಂದರು.

ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಅರುಣ ಹುಡೇದಗೌಡ್ರ, ಬಿ.ಶ್ರೀನಿವಾಸ, ಶಿವಾನಂದಯ್ಯ ಹಿರೇಮಠ, ಮಹಾಲಿಂಗಯ್ಯ ಚಿಕ್ಕಮಠ, ಮುಪ್ಪಯ್ಯ ಹಿರೇಮಠ, ಕುಬೇರಗೌಡ ಪೋಲಿಸಗೌಡ್ರ, ಶಂಭನಗೌಡ ಪೊಲೀಸಗೌಡ್ರ, ಟಾಕನಗೌಡ ಪಾಟೀಲ, ವೀರನಗೌಡ ಸಿ ಹೊನ್ನಾಗೌಡ್ರ, ಧರ್ಮಪ್ಪ ಹೊನ್ನಪ್ಪನವರ, ವೀರನಗೌಡ ಕೆ ದುಂಡಿಗೌಡ್ರ, ಎಫ್.ವಿ.ಪೋಲಿಸಗೌಡ್ರ, ಎನ್.ಸಿ ಸಿದ್ದಣ್ಣವರ, ನಿಸ್ಸಿಮಪ್ಪ ಗಾಣಿಗೇರ, ಗುರುಬಸಪ್ಪ ಹಡಪದ ವೀರಭದ್ರಗೌಡ ಮಾ ಪೊಲೀಸಗೌಡ್ರ, ಬಸವರಾಜ ಲಂಗೋಟಿ, ವೀರಭದ್ರಪ್ಪ ಆಗಡಿ, ರುದ್ರಗೌಡ ಮ ಪೋಲಿಸಗೌಡ್ರ,ಬಸವರಾಜ ಮಾಯಣ್ಣವರ, ಮಹದೇವಪ್ಪ ಸಿದ್ದಣ್ಣವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-22-730927890

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.