ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಸಂತೆ ಟೆಂಡರ್ ಕರೆಯದೆ ಕರವಸೂಲಿ ಮಾಡುವುದನ್ನು ತಡೆಯುವಂತೆ ಆಗ್ರಹಿಸಿ ಶನಿವಾರ ಬೀದಿಬದಿ ವ್ಯಾಪಾರಸ್ಥರು, ಸಾರ್ವಜನಿಕರು ಪುರಸಭೆ ಕಚೇರಿ ವ್ಯವಸ್ಥಾಪಕಿ ಬಸಮ್ಮಾ ಕೊರಕಲ್ಲ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಪುರಸಭೆ ಟೆಂಡರ್ ಅವಧಿ ಮುಗಿದಿದ್ದು, ಟೆಂಡರ್ ಕರೆಯದೆ ಕರ ವಸೂಲಿ ಮಾಡುತ್ತಿದ್ದಾರೆ. ಖಾಸಗಿ ವ್ಯಕ್ತಿಗಳಿಂದ ಕರ ವಸೂಲಿ ಮಾಡುವುದು ಕಾನೂನು ಬಾಹಿರವಾಗಿದೆ. ಆದರೆ ಪುರಸಭೆ ಖಾಸಗಿ ವ್ಯಕ್ತಿಗಳಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದೆ. ಅದರಿಂದಾಗಿ ಬೀದಿಬದಿ ವ್ಯಾಪಾರಸ್ಥರಿಗೆ ಅನ್ಯಾಯವಾಗುತ್ತಿದೆ. ವ್ಯಾಪಾರಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ. ಅಕ್ರಮವಾಗಿ ಕರ ವಸೂಲಿ ಮಾಡುತ್ತಿರುವುದನ್ನು ತಕ್ಷಣ ತಡೆಯಬೇಕು ಎಂದು ಆಗ್ರಹಿಸಿದರು.

ಪುರಸಭೆ ಈ ವರೆಗೆ ಬೀದಿಬದಿಯ ವ್ಯಾಪಾಸ್ಥರಿಂದ ಕರ ವಸೂಲಿ ಮಾಡುತ್ತಿದೆ ವಿನಃ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಮಳೆ, ಬಿಸಿಲಿನಲ್ಲಿ ಇಕ್ಕಟ್ಟಾದ ಸ್ಥಳದಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದೇವೆ. ಅಲ್ಪಸ್ವಲ್ಪ ಬಂದಿರುವ ಲಾಭವನ್ನು ಪುರಸಭೆ ಕರ ವಸೂಲಿಗಾರರು ಒತ್ತಾಯ ಪೂರ್ವಕವಾಗಿ ಕಸಿದುಕೊಳ್ಳುತ್ತಿದ್ದಾರೆ. ಬಂದಿರುವ ಲಾಭ ಅವರಿಗೆ ನೀಡಿ ಮನೆಗೆ ಹೋಗುವಂತಾಗುತ್ತಿದೆ. ಅದರಿಂದಾಗಿ ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು.

ಬೀದಿಬದಿ ವ್ಯಾಪಾರಸ್ಥರ ಅಧ್ಯಕ್ಷ ನಿನ್ನೆಸಾಬ ದೇವಗೇರಿ, ಎನ್.ಎಸ್.ಬಳಿಗಾರ, ಮಂಜುನಾಥ ಕೂಲಿ, ಎಸ್.ಎಸ್.ಮಾಮ್ಲೆಶೆಟ್ಟರ, ಸುರೇಶ ಮಾಮ್ಲೆಪಟ್ಟಣಶೆಟ್ಟರ, ವಿನಯ ಶೆಟ್ಟರ, ಗುರುಲಿಂಗಪ್ಪ ಶೆಟ್ಟರ, ನಿಖರಹ್ಮದ ಪುಲಾರೆ, ಆರ್.ಪಿ.ಸುಲಾಖೆ, ಪುರಸಭೆ ಸಮುದಾಯ ಸಂಘಟಕ ಅಧಿಕಾರಿ ಬಿ.ಎಸ್.ಗಿಡ್ಡಣ್ಣವರ, ಪುರಸಭೆ ಸಿಬ್ಬಂದಿ ನಿವರ್ಾಹಕ ಸತೀಶ ತಳವಾರ, ಬೀದಿಬದಿ ವ್ಯಾಪಾರಸ್ಥರು, ಸಾರ್ವಜನಿಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-22-737055003

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.