ಶಿರಹಟ್ಟಿ: ಮುರಿದ ಕಪಾಟು, ಹರಿದ ಪುಸ್ತಕ, ಅಲ್ಲಿಲ್ಲಿ ಸೋರುವ ಕಿಂಡಿ, ಇಕ್ಕಟ್ಟಾದ ಸ್ಥಳ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ನಲುಗುತ್ತಿದ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಗಳಿಗೆ ಹೈಟೆಕ್ ಸ್ಪರ್ಶ ಕೊಟ್ಟು ಡಿಜಿಟಲ್ ಹಾದಿಯ ಮೂಲಕ ಯುವಕರು, ವಿದ್ಯಾರ್ಥಿಗಳು, ಸಾರ್ವಜನಿಕರ ಶೈಕ್ಷಣಿಕ ಮತ್ತು ಬೌದ್ಧಿಕ ಮಟ್ಟವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕಿದ್ದ ಡಿಜಿಟಲ್ ಗ್ರಂಥಾಲಯಗಳಿಗೆ ಸದ್ಯ ಗ್ರಹಣ ಹಿಡಿದಂತಾಗಿದೆ.

ಕೇಂದ್ರ ಸರ್ಕಾರದ ನೆರವಿನೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯು ರಾಜ್ಯದಲ್ಲಿ ಹೊಸದಾಗಿ ₹263.96 ಕೋಟಿ ವೆಚ್ಚದಲ್ಲಿ ಸುಮಾರು 6,599 ‘ಗ್ರಾಮ ಗ್ರಂಥಾಲಯ’ಗಳನ್ನು ತೆರೆಯಲು ನಿರ್ಧರಿಸಿತ್ತು. ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಂಡವಾಳ ಹೂಡಿಕೆಗಾಗಿ ನೀಡುವ ಹಣಕಾಸು ನೆರವು ಯೋಜನೆಯ (ಎಸ್.ಎ.ಎಸ್.ಸಿ.ಐ) ‘ಮಕ್ಕಳು ಮತ್ತು ಹದಿಹರೆಯದವರಿಗಾಗಿ ಗ್ರಂಥಾಲಯಗಳು ಮತ್ತು ಡಿಜಿಟಲ್ ಮೂಲಸೌಕರ್ಯ’ ಕಾರ್ಯಕ್ರಮದಡಿ 31 ಜಿಲ್ಲೆಗಳಲ್ಲಿ ‘ಗ್ರಾಮ ಗ್ರಂಥಾಲಯ’ಗಳನ್ನು ಪ್ರಾರಂಭಿಸಲು ಸಿದ್ಧತೆ ಕೈಗೊಳ್ಳಲಾಗಿತ್ತು.

ಆದರೆ, 2025ರ ಡಿಸೆಂಬರ್ 2ರಂದು ಸರ್ಕಾರ ಗದಗ ಜಿಲ್ಲೆಯಲ್ಲಿ ಹೊಸದಾಗಿ ಪ್ರಾರಂಭಿಸಲು ಅನುಮೋದನೆ ನೀಡಲಾಗಿದ್ದ ಗ್ರಂಥಾಲಯಗಳ ಕಾರ್ಯಾಚರಣೆಯನ್ನು ಮುಂದಿನ ಆದೇಶದವರೆಗೆ ಅನುಷ್ಠಾನಗೊಳಿಸದಿರಲು ಆದೇಶ ಹೊರಡಿಸಿದೆ. ಪ್ರಸ್ತುತ ಈ ವಿಷಯದ ಕುರಿತು ಪರಿಷ್ಕೃತ ಮಾರ್ಗಸೂಚಿಗಳನ್ನು ರಚಿಸಲಾಗುತ್ತಿರುವ ಹಿನ್ನಲೆಯಲ್ಲಿ, ಸರ್ಕಾರದ ಆದೇಶದಂತೆ ನಿಯಮಾನುಸಾರ ಅಗತ್ಯ ಕ್ರಮ ವಹಿಸಿಲು ಸೂಚಿಸಿದೆ.

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಗ್ರಂಥಾಲಯಗಳಿದ್ದರೂ ಹೆಚ್ಚುವರಿಯಾಗಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಗ್ರಾಮಗಳನ್ನು ಆಯ್ಕೆ ಮಾಡುವ ಮೂಲಕ ಕೇಂದ್ರ ಸರ್ಕಾರದ ಹಣಕಾಸು ನೆರವು ಯೋಜನೆಯಡಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಕ್ಕಳ ಮತ್ತು ಯುವಜನತೆಯ ಜ್ಞಾನಾರ್ಜನೆಗೆ ಗ್ರಾಮ ಗ್ರಂಥಾಲಯಗಳನ್ನು ಕಳೆದ ವರ್ಷದ ಆರಂಭದಲ್ಲಿ ಸ್ಥಾಪಿಸಲಾಯಿತು. ಪ್ರಾರಂಭಿಸಿದ ಆರೇಳು ತಿಂಗಳು ಕಾರ್ಯನಿರ್ವಹಿಸಿದ ಗ್ರಾಮೀಣ ಗ್ರಂಥಾಲಯಗಳು ಮುಂದೆ ಸರ್ಕಾರದ ಆದೇಶದಂತೆ ಸ್ಥಗಿತಗೊಳ್ಳುವ ಮೂಲಕ ಗ್ರಾಮೀಣ ಮಕ್ಕಳ ಓದಿನ ಹವ್ಯಾಸಕ್ಕೆ ತಿಲಾಂಜಲಿ ಇಟ್ಟಿವೆ.

ಸ್ಥಾಪನೆಗೊಂಡ ಗ್ರಾಮ ಗ್ರಂಥಾಲಗಳಿಗೆ (ಬ್ರಾಂಚ್ ಲೈಬ್ರರಿ) ಜಿಲ್ಲಾ ಪಂಚಾಯಿತಿ ವತಿಯಿಂದ ಅಗತ್ಯವಿರುವ ಪುಸ್ತಕಗಳು, ಪುಸ್ತಕಗಳನ್ನು ಇಡಲು ರ್ಯಾಕ್ಗಳು ಹಾಗೂ ಓದುಗರಿಗೆ ಬೇಕಾದ ಪೀಠೋಪಕರಣಗಳನ್ನು ಪೂರೈಕೆ ಮಾಡುವುದರೊಂದಿಗೆ ಸುಸಜ್ಜಿತ ಗ್ರಂಥಾಲಯ ನಿರ್ಮಿಸಲಾಗಿತ್ತು. ಅಲ್ಲದೇ ಗ್ರಾಮ ಪಂಚಾಯಿತಿ ವತಿಯಿಂದ ವಸೂಲಿ ಮಾಡಲಾದ ತೆರಿಗೆಯಲ್ಲಿ ಗ್ರಂಥಾಲಯ ಕರವನ್ನು ಸೇರಿಸಿ ಗ್ರಂಥಾಲಯ ನಿರ್ವಹಣೆ ಹಾಗೂ ಕೆಲಸಗಾರರಿಗೆ ವೇತನ ನೀಡಲಾಗುತ್ತಿತ್ತು. ಇದೀಗ ಗ್ರಾಮ ಗ್ರಂಥಾಲಯಗಳು ಸ್ಥಗಿತಗೊಂಡಿರುವುದರಿಂದ ಅದರಲ್ಲಿನ ಪುಸ್ತಕ ಸಂಗ್ರಹ ದೂಳು ತಿನ್ನುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-23-545474912

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.