ಹಾನಗಲ್: ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾಗುವ ತಾಲ್ಲೂಕಿನ ನದಿ ತಟದ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿದ್ದ ಎನ್ಡಿಆರ್ಎಫ್ ತಂಡದವರು ಸ್ಥಳೀಯರೊಂದಿಗೆ ಸಂವಾದ ನಡೆಸಿ, ಪ್ರವಾಹಕ್ಕೆ ಕಾರಣವಾಗುವ ಅಂಶಗಳನ್ನು ಕಲೆ ಹಾಕಿದರು.

ಕೂಡಲ, ಅಲ್ಲಾಪೂರ, ನಾಗನೂರ, ಹರನಗಿರಿ ಗ್ರಾಮಗಳು ಮತ್ತು ಈ ಭಾಗದ ವರದಾ ನದಿ ಪಾತ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರವಾಹ ಉಂಟಾಗುವ ಸಮಯದಲ್ಲಿ ಎನ್ಡಿಆರ್ಎಫ್ ಒದಗಿಸುವ ಮಾರ್ಗಸೂಚಿಗಳನ್ನು ಅನುಸರಿಸಿದರೆ ಹೆಚ್ಚಿನ ಅನಾಹುತ ತಪ್ಪಿಸಲು ಸಾಧ್ಯವಿದೆ ಎಂದು ಎನ್ಡಿಆರ್ಎಫ್ ತಂಡದ ಇನ್ಸ್ಪೆಕ್ಟರ್ ಹರೀಶಚಂದ್ರ ಪಾಂಡೆ ಹೇಳಿದರು.

ಆಂಧ್ರಪ್ರದೇಶದ ವಿಜಯವಾಡದ ಕೇಂದ್ರ ಕಮಾಂಡೆಂಟ್ 10 ನೇ ಬೆಟಾಲಿಯನ್ನ 10 ಜನರ ತಂಡ ಆಗಮಿಸಿತ್ತು. ತಾಲ್ಲೂಕಿನ ಅಗ್ನಿಶಾಮಕ ಸಿಬ್ಬಂದಿ ಮತ್ತು ಸಂಬಂಧಿಸಿದ ಪ್ರದೇಶದ ಕಂದಾಯ ಇಲಾಖೆ ಅಧಿಕಾರಿಗಳು ಎನ್ಡಿಆರ್ಎಫ್ ತಂಡಕ್ಕೆ ಸಾಥ್ ನೀಡಿದ್ದರು.

ಜಿಲ್ಲೆಯಲ್ಲಿ ಪ್ರವಾಹ ಸಮಯದಲ್ಲಿ ಆಗುವ ಅನಾಹುತಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಪ್ರವಾಹ, ಪ್ರಾಕೃತಿಕ ವಿಕೋಪಗಳಿಗೆ ಒಳಗಾಗುವ ಜನರಿಗೆ ಅಗತ್ಯದ ಅರಿವು, ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕಾರ್ಯಾಗಾರ ಮಾಡಲಿದ್ದೇವೆ. ಇಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಕೇಂದ್ರಕ್ಕೆ ರವಾನಿಸಲಾಗುತ್ತದೆ ಎಂದು ತಿಳಿಸಿದರು. ಸಬ್ಇನ್ಸ್ಪೆಕ್ಟರ್ ಮುನಿಕೃಷ್ಣ, ಹವಾಲ್ದಾರ್ ನಾಗರಾಜ ಇದ್ದರು.

ಎನ್ಡಿಆರ್ಎಫ್ ತಂಡದಿಂದ ಜ.6 ರಂದು ಬೆಳಿಗ್ಗೆ 10 ಗಂಟೆಗೆ ತಾಲ್ಲೂಕಿನ ಅಕ್ಕಿಆಲೂರ ಗ್ರಾಮದ ಸಿಂಧೂರ ಸಿದ್ಧಪ್ಪ ಪಿಯು ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಕಂದಾಯ ಇಲಾಖೆ ಶಿರಸ್ತೇದಾರ ಬಸವರಾಜ ಅಂಗಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.