ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಾಘಾತದಿಂದ ತಾಯಿ ನಿಧನ: ನೋವಿನಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಮಗ

Last Updated 30 ಮಾರ್ಚ್ 2022, 18:47 IST
ಅಕ್ಷರ ಗಾತ್ರ

ಶಿಗ್ಗಾವಿ: ಹೃದಯಾಘಾತದಿಂದ ತಾಯಿ ನಿಧನರಾಗಿದ್ದು, ಆ ನೋವಲ್ಲೇ ಮಗ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾನೆ.ಶಿಗ್ಗಾವಿ ತಾಲ್ಲೂಕಿನ ಹನುಮರಹಳ್ಳಿ ಗ್ರಾಮದ ವಿದ್ಯಾರ್ಥಿ ಯಶವಂತಜೆಎಂಜೆ ಪ್ರೌಢಶಾಲೆಯಲ್ಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಬಂದು ಇಂಗ್ಲಿಷ್ ವಿಷಯದ ಪರೀಕ್ಷೆ ಬರೆದಿದ್ದಾನೆ.ನಂತರತಾಯಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾನೆ.

ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಹನುಮರಹಳ್ಳಿ ಗ್ರಾಮದ ವಿದ್ಯಾರ್ಥಿ ಯಶವಂತ ಉಮೇಶ ಸಂಶಿ ಅವರ ತಾಯಿಸರಸ್ವತಿ ಉಮೇಶ ಸಂಶಿ (40) ಮಂಗಳವಾರ ಸಂಜೆ 4.30ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಗುವಿನ ತಾಯಿ ನಿಧನರಾದ ಸುದ್ದಿ ತಿಳಿದ ಬಿಇಒ ಅವರ ತಂಡ ವಿದ್ಯಾರ್ಥಿಗೆ ಆತ್ಮಸ್ಥೈರ್ಯ ಮೂಡಿಸಿದ್ದಾರೆ. ಪರೀಕ್ಷೆ ಬರೆಯುವಂತೆ ಮನವರಿಕೆ ಮಾಡಿದ್ದಾರೆ. ಅದರಿಂದ ಪ್ರೇರಿತನಾದ ವಿದ್ಯಾರ್ಥಿ ಯಶವಂತ ಪರೀಕ್ಷೆ ಬರೆದು ತಾಯಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ.

ಕೃಷಿ ಕೆಲಸದಲ್ಲಿ ನಿರತರಾಗಿರುವವಿದ್ಯಾರ್ಥಿ ತಂದೆ ಉಮೇಶ ಸಂಶಿ ಮಾತನಾಡಿ, ಪತ್ನಿ ಸರಸ್ವತಿ ಕಳೆದ ಎಂಟು ದಿನಗಳ ಹಿಂದೆ ತಲೆಯಪಾರ್ಶಿ ರೋಗದಿಂದ ಬಳಲುತ್ತಿದ್ದರು. ಅದರ ಜತೆಗೆ ಮಂಗಳವಾರ ಸಂಜೆ ಹೃದಯಾಘಾತ ಸಂಭವಿಸಿ ನಿಧನರಾದರು. ಮಗ ಯಶವಂತ ಎಸ್ಸೆಸ್ಸೆಲ್ಸಿ, ಮಗಳು ಆಶ್ವಿನಿ 6ನೇ ತರಗತಿ ಓದುತ್ತಿದ್ದಾರೆ. ಮಗನ ವ್ಯಾಸಂಗಹಾಳಾಗಬಾರದು ಎಂಬ ಉದ್ದೇಶದಿಂದ ಪರೀಕ್ಷೆ ಬರೆಯಲು ಹೋಗುವಂತೆ ಮನವರಿಕೆ ಮಾಡಿದ್ದೇನೆ. ಅದರಂತೆ ಮಗ ಪರೀಕ್ಷೆ ಬರೆಯಲು ಹೋಗಿದ್ದಾನೆ ಎಂದುಭಾವುಕರಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT