ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಬೀಜ: 3 ಕ್ವಿಂಟಲ್‌ ಅಕ್ರಮ ದಾಸ್ತಾನು ಪತ್ತೆ

Last Updated 19 ಮೇ 2022, 6:09 IST
ಅಕ್ಷರ ಗಾತ್ರ

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ಕೃಷಿ ಪರಿಕರ ಹಾಗೂ ವಿವಿಧ ಬಿತ್ತನೆ ಬೀಜದ ಮಳಿಗೆಗಳ ಮೇಲೆ ದಾಳಿ ನಡೆಸಿದ ಬೆಳಗಾವಿಯ ಜಾಗೃತ ಕೋಶದ ಅಧಿಕಾರಿಗಳ ತಂಡವು 3 ಕ್ವಿಂಟಲ್‌ ನಷ್ಟು ಮೆಕ್ಕೆಜೋಳದ ಬಿತ್ತನೆ ಬೀಜಗಳನ್ನು ವಶಪಡಿಸಿಕೊಂಡಿದ್ದು ಅಂಗಡಿಗಳ ಮಾಲೀಕರ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿದೆ.

ಇಲ್ಲಿನ ಅಶೋಕ ನಗರದ ಮಲ್ಲಿಕಾರ್ಜುನ ಸೀಡ್ಸ್ ಮಾಲೀಕತ್ವದ ಗೋದಾಮಿನಲ್ಲಿ ಅನಧಿಕೃತವಾಗಿ ಸಂಗ್ರಹಿಸಿ ಇಟ್ಟಿದ್ದ 305 ಪಾಕೀಟ್‌ (ತಲಾ 4 ಕೆ.ಜಿ)ನ ಒಟ್ಟು 1,220 ಕೆ.ಜಿ ಮೆಕ್ಕೆಜೋಳ ಬಿತ್ತನೆ ಬೀಜಗಳನ್ನು ಹಾಗೂ ಗೂಡ್ಸ್‌ ವಾಹನದಲ್ಲಿ ಯಾವುದೇ ದಾಖಲಾತಿ ಇಲ್ಲದೆ ಸಂಗ್ರಹಿಸಿದ್ದ ರಾಸಾಯನಿಕ ಉಪಚಾರ ಮಾಡದ 37 ಗೋಣಿ ಚೀಲ (ಅಂದಾಜು 1,850 ಕೆ.ಜಿ) ಮೆಕ್ಕೆಜೋಳ ಬಿತ್ತನೆ ಬೀಜಗಳನ್ನು ಜಪ್ತು ಮಾಡಲಾಗಿದೆ.

ಈ ಸಂಬಂಧ ಕಿರಣ ಮಲ್ಲಿಕಾರ್ಜುನ ಅಂಗಡಿ ಹಾಗೂ ಗಂಗೇನಹಳ್ಳಿಯ ಹನುಮಂತ ಚೌಡಪ್ಪ ಎಂಬುವವರ ಮೇಲೆ ಕೃಷಿ ಅಧಿಕಾರಿ ಅರವಿಂದ ಎಂ. ನಗರ ಠಾಣೆಗೆ ದೂರು ನೀಡಿದ್ದಾರೆ.

ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಖಾಶಿ, ಕೃಷಿ ಇಲಾಖೆ ಉಪ ನಿರ್ದೇಶಕ ಬಿ. ವೆಂಕಟರಮಣಪ್ಪ, ಸ್ಫೂರ್ತಿ ಜಿ.ಎಸ್‌. ಹಾಗೂ ಕೃಷಿ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT