ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಭೀತಿಯಿಂದ ಮತ ಚಲಾಯಿಸಿ: ಎಸ್ಪಿ ಅಭಯ

Last Updated 22 ಏಪ್ರಿಲ್ 2019, 16:34 IST
ಅಕ್ಷರ ಗಾತ್ರ

ಹಾವೇರಿ: ಚುನಾವಣೆಗೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲ ಮತದಾರರು ನಿರ್ಭೀತಿಯಿಂದ ತಮ್ಮ ಹಕ್ಕು ಚಲಾಯಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ಮನವಿಯೊಂದಿಗೆ ಅಭಯ ನೀಡಿದ್ದಾರೆ.

ಸಮೀಪದ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ನಿಯೋಜಿಸಲಾಗಿದೆ. 6 ಡಿವೈಎಸ್ಪಿ, 18 ಸರ್ಕಲ್ ಇನ್‌ಸ್ಪೆಕ್ಟರ್, 21 ಪೊಲೀಸ್ ಸಬ್ ಇನ್‌ಸ್ಪೆಕ್ಟರ್, 18 ಎಎಸ್ಐ, 1,039 ಎಚ್‌.ಸಿ. ಮತ್ತು ಕಾನ್‌ಸ್ಟೆಬಲ್‌, 998 ಗೃಹರಕ್ಷಕದ ದಳ ಸಿಬ್ಬಂದಿ, 85 ಜೈಲು ಸಿಬ್ಬಂದಿ, 18 ಅರಣ್ಯ ರಕ್ಷಕರು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಅಲ್ಲದೇ, 20 ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕುಡಿಗಳು,6 ಕೆ.ಎಸ್.ಆರ್.ಪಿ. ತುಕುಡಿಗಳು, 6 ಕೇಂದ್ರ ಸಶಸ್ತ್ರ್ರ ಮೀಸಲು ಪಡೆ ತುಕುಡಿಗಳು ಬಂದೋಬಸ್ತಿನಲ್ಲಿವೆ ಎಂದರು.

ಎರಡು ಎಸ್.ಎಸ್.ಟಿ., ಎರಡು ಎಫ್.ಎಸ್.ಟಿ. ತಂಡಗಳು ಪೊಲೀಸ್ ಭದ್ರತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. 106 ಸೆಕ್ಟರ್ ತಂಡಗಳು ಎಎಸ್ಐ ಯಿಂದ ಡಿವೈಎಸ್ಪಿ ತನಕದ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದ್ದು, ತುರ್ತು ಸೇವೆಗೆ ಹಾಜರಾಗಲಿವೆ ಎಂದರು.

ಶಿವಬಸವನಗರ, ನೆಗಳೂರು ಹಾಗೂ ರಾಣೆಬೆನ್ನೂರು ನಗರದಲ್ಲಿ ಒಂದೇ ಆವರಣದಲ್ಲಿ ಏಳು ಮತಗಟ್ಟೆಗಳಿವೆ. ಅಂತಹ ಸ್ಥಳಗಳಿಗೆ ಕೇಂದ್ರ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 518 ಪರವಾನಿಗೆ ಪಡೆದ ಖಾಸಗಿ ಶಸ್ತ್ರಗಳಿದ್ದು, ಈ ಪೈಕಿ 497 ಅನ್ನು ಠಾಣೆಯಲ್ಲಿ ಠೇವಣಿ ಮಾಡಲಾಗಿದೆ. 21ಕ್ಕೆ ವಿನಾಯಿತಿ ನೀಡಲಾಗಿದೆ. 933 ಆರೋಪಿಗಳಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ. 1,578 ರೌಡಿಗಳು ಹಾಗೂ 114 ಕಮ್ಯೂನಲ್ ಗೂಂಡಾಗಳ ಮೇಲೆ ಪ್ರಕರಣ ದಾಖಲಾಗಿದೆ. ದುರ್ಬಲ ಮತಗಟ್ಟೆ ವ್ಯಾಪ್ತಿಯ 218 ಜನರ ಮೇಲೆ ಪ್ರಕರಣ ದಾಖಲಿಸಿ ಬಾಂಡೋವರ್ ಮಾಡಲಾಗಿದೆ. ಹಿಂದಿನ ಚುನಾವಣೆಯಲ್ಲಿ ಅಪಾರಧ ಪ್ರಕರಣದಲ್ಲಿ ಭಾಗಿಯಾದ 142 ಜನರ ಮೇಲೆ ದೂರು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 498 ಜನರ ಮೇಲೆ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಾಂಡೋವರ್ ಮಾಡಲಾಗಿದೆ. ಯಾರನ್ನೂ ಗಡಿಪಾರು ಮಾಡಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT