ಹಾವೇರಿ: ಕೊಕ್ಕೊದಲ್ಲಿ ಮಿಂಚಿದ ಕಳಸೂರಿನ ಬಾಲಕಿಯರು

7
ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯರ ಸತತ ಸಾಧನೆ

ಹಾವೇರಿ: ಕೊಕ್ಕೊದಲ್ಲಿ ಮಿಂಚಿದ ಕಳಸೂರಿನ ಬಾಲಕಿಯರು

Published:
Updated:
Deccan Herald

ಹಾವೇರಿ: ಸವಣೂರ ತಾಲ್ಲೂಕಿನ ಕಳಸೂರ ಗ್ರಾಮದ ವಿದ್ಯಾರ್ಥಿನಿಯರಾದ ಮಧು ಕರಬಣ್ಣನವರ, ಸವಿತಾ ಹಿರೂರು ಮತ್ತು ಪಾರ್ವತಿ ಹೊಮ್ಮರಡಿ 2017–18ನೇ ಮಧ್ಯಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಕೊಕ್ಕೊದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರೆ, ಇದೇ ಗ್ರಾಮದ ಶ್ರುತಿ ನಡುವಿನಮನಿ, ಅನ್ನಪೂರ್ಣ ಸುಣಗಾರ ಮತ್ತು ಪವಿತ್ರಾ ರಾಜಪ್ಪನವರ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದರು. 

ಕಳಸೂರಿನ ಈ ಪ್ರತಿಭೆಗಳು ಅಥ್ಲೆಟಿಕ್ಸ್‌ನಲ್ಲೂ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಇವರೆಲ್ಲ, ಕಳಸೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾಗಿದ್ದು, ಜಿಲ್ಲೆಗೆ ಗರಿಮೆ ತಂದಿದ್ದಾರೆ.

ಈಗ, ನಗರದ ಎಸ್‌.ಎಂ.ಎಸ್‌. ಕಾಲೇಜಿನಲ್ಲಿ ಪ್ರಥಮ ವರ್ಷ ಪಿಯು ಓದುತ್ತಿರುವ ಮಧು ಕರಬಣ್ಣನವರ, ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗಲೇ ರಾಜ್ಯ ಕೊಕ್ಕೊ ತಂಡವನ್ನು ಪ್ರತಿನಿಧಿಸಿದ್ದರು. ಖೇಲೋ ಇಂಡಿಯಾ ಮತ್ತು ದಸರಾ ಗ್ರಾಮೀಣ ಕ್ರೀಡಾಕೂಟದಲ್ಲಿ 400ಮೀ ಓಟದಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಅವರು ‌‌ಸಂಗೀತದಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಅವರ ತಂದೆ ನಾಗರಾಜ ಕರಬಣ್ಣನವರ ತಾಯಿ ಲಕ್ಷಮವ್ವ ಕೂಲಿ ಮಾಡುತ್ತಿದ್ದಾರೆ. 9ನೇ ತರಗತಿಯಲ್ಲಿರುವ ಅವರ ತಂಗಿ ಕವಿತಾ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕಳಸೂರ ಪ್ರೌಢಶಾಲಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಸವಿತಾ ಹಿರೂರ ಹೈಜಂಪ್‌ ಮತ್ತು 400ಮೀ ಓಟದಲ್ಲಿ ರಾಜ್ಯಮಟ್ಟದಲ್ಲಿ 3ನೇ ಸ್ಥಾನ ಪಡೆದಿದ್ದು, ಶಾಲಾ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟ ಹಾಗೂ ಖೇಲೋ ಇಂಡಿಯಾ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದರು.

ಪಾರ್ವತಿ ಹೊಮ್ಮರಡಿ 3ಸಾವಿರ ಮೀ ಓಟದಲ್ಲಿ ರಾಜ್ಯಮಟ್ಟದಲ್ಲಿ 3ನೇ ಸ್ಥಾನ ಪಡೆದಿದ್ದರು. ಖೇಲೋ ಇಂಡಿಯಾದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು.

ಶೃತಿ ನಡುವಿನಮನಿ ಒಂದು ಸಾವಿರ ಮೀ. ಓಟದಲ್ಲಿ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದಾರೆ. 2013ರಲ್ಲಿ ದೈಹಿಕ ಶಿಕ್ಷಕರಾಗಿ ಎಸ್.ಎಸ್.ಸಣ್ಣಬೆನ್ನಿ ಬಂದ ನಂತರ, ಕೊಕ್ಕೊದಲ್ಲಿ ಸಾಧನೆ ಶಿಖರಪ್ರಾಯವಾಗಿದೆ. ಮುಖ್ಯೋಪಾಧ್ಯಾಯರು ಹಾಗೂ ಇತರ ಶಿಕ್ಷಕರ ಬೆಂಬಲವಿದೆ ಎಂದು ಗ್ರಾಮಸ್ಥರು ಶ್ಲಾಘಿಸುತ್ತಾರೆ. ಇಲ್ಲಿರುವ ಬಹುತೇಕ ವಿದ್ಯಾರ್ಥಿಗಳು ಬಡತನದ ಹಿನ್ನೆಲೆಯವರು. 

‘ವಿದ್ಯಾರ್ಥಿನಿಯರು ಶಾಲಾ ಮೈದಾನದಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡು ತಾಸು ಅಭ್ಯಾಸ ಮಾಡುತ್ತಾರೆ. ಪಂದ್ಯಾವಳಿ ಪೂರ್ವದಲ್ಲಿ   ತರಬೇತಿ ಕ್ಯಾಂಪ್‌ ನಡೆಯುತ್ತದೆ. ಜಿಲ್ಲೆಯ ಅನುಭವಿ ಕ್ರೀಡಾ ತರಬೇತಿದಾರರನ್ನು ಆಹ್ವಾನಿಸಿ ಅಭ್ಯಾಸ ನಡೆಸುತ್ತಾರೆ ಎಂದು ಗ್ರಾಮಸ್ಥ ಮಂಜುನಾಥ ಕೊಳೂರು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !