ಹಾವೇರಿ: ‘ಜನರಿಗೆ ತುರ್ತು ಸಂದರ್ಭದಲ್ಲಿ ಸೇವೆ ನೀಡಲು ನಗರದಲ್ಲಿ ನಿರ್ಮಿಸಿರುವ ರಕ್ತ ಭಂಡಾರಕ್ಕೆ ಆರ್ಥಿಕ ಸಹಕಾರ ನೀಡಲಾಗುವುದು’ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ರಾಜೀವಶೆಟ್ಟಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ‘ರೆಡ್ ಕ್ರಾಸ್ ಸಂಸ್ಥೆಯ ಸೇವಾ ಕಾರ್ಯಗಳು, ಪ್ರತಿ ಹಳ್ಳಿ ಹಳ್ಳಿಗೂ ತಲುಪುವ ರೀತಿಯಲ್ಲಿ ಪದಾಧಿಕಾರಿಗಳು ಕೆಲಸ ಮಾಡಬೇಕು’ ಎಂದರು.

‘ನಾಲ್ಕು ಬಾರಿ ನೊಬೆಲ್ ಪ್ರಶಸ್ತಿ ಪಡೆದ ಏಕೈಕ ಸೇವಾ ಸಂಸ್ಥೆಯಾಗಿರುವ ರೆಡ್ಕ್ರಾಸ್ ಸಂಸ್ಥೆಯು ನಿರಂತರವಾಗಿ ಸೇವಾ ಕಾರ್ಯ ಮಾಡುತ್ತಿದೆ. ರಾಜ್ಯದ ಎಲ್ಲ ಜಿಲ್ಲಾ–ತಾಲ್ಲೂಕು ರೆಡ್ ಕ್ರಾಸ್ ಘಟಕ ಬಲಪಡಿಸಬೇಕಿದೆ. ಹಾವೇರಿ ಜಿಲ್ಲೆಯಲ್ಲಿಯೂ ಕ್ರಿಯಾಶೀಲ ಪದಾಧಿಕಾರಿಗಳಿದ್ದಾರೆ. ಆರು ತಿಂಗಳಿನಲ್ಲಿಯೇ ರಕ್ತ ಭಂಡಾರ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿರುವುದು ಶ್ಲಾಘನೀಯ’ ಎಂದರು.

ಜಿಲ್ಲಾ ಗೌರವ ಕಾರ್ಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ‘ಎಲ್ಲ ಪದಾಧಿಕಾರಿಗಳು ಅನುಭವ ಹೊಂದಿದವರಾಗಿದ್ದಾರೆ. ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತೇವೆ. ಬ್ಲಡ್ ಬ್ಯಾಂಕ್ಗೆ ಆರ್ಥಿಕ ನೆರವು ನೀಡಿದರೆ, ರೆಡ್ ಕ್ರಾಸ್ ಹೆಚ್ಚು ಕೆಲಸ ಮಾಡುತ್ತದೆ’ ಎಂದರು.

ರಾಜ್ಯ ಸಮಿತಿ ಸದಸ್ಯರಾದ ಮಹಾಂತೇಶ ವೀರಾಪುರ, ಬಾಲಕೃಷ್ಣ ವಿ., ರವಿ ಮೆಣಸಿನಕಾಯಿ, ನಿಂಗಪ್ಪ ಆರೇರ, ಪ್ರಭು ಹಿಟ್ನಳ್ಳಿ, ಪ್ರದೀಪ ದೊಡ್ಡಗೌಡ್ರ, ಹನುಮಂತಗೌಡ ಗೊಲ್ಲರ, ರವಿ ಹಿಂಚಿಗೇರಿ, ಉಡಚಪ್ಪ ಮಾಳಗಿ, ಎಸ್.ಸಿ. ಹಿರೇಮಠ, ಮಲ್ಲಿಕಾರ್ಜುನ ಕೊಟೂರು, ನಾಗರಾಜ ಇಚ್ಚಂಗಿ, ವಿಜಯಕುಮಾರ ಚಿನ್ನಿಕಟ್ಟಿ, ಪ್ರಕಾಶ ಶೆಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-22-1270718007

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.