ರಸ್ತೆಗೆ ಕಸ; ಸಂಚಾರಕ್ಕೆ ತೊಂದರೆ

7

ರಸ್ತೆಗೆ ಕಸ; ಸಂಚಾರಕ್ಕೆ ತೊಂದರೆ

Published:
Updated:
ಕಾರಡಗಿ ಗ್ರಾಮದ ರಸ್ತೆ ಮೇಲೆ ಬಿದ್ದಿರುವ ಕಸದ ರಾಶಿ

ಸವಣೂರ: ಪಟ್ಟಣದಿಂದ ಹುಲಗೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಾರಡಗಿ ಗ್ರಾಮಸ್ಥರು ಕಸ ಹಾಕುತ್ತಿರುವುದ್ದರಿಂದ ನಿತ್ಯ ಸಂಚರಿಸುವ ಪ್ರಯಾಣಿಕರು ದುರ್ವಾಸನೆಯಿಂದ ಮೂಗು ಮುಚ್ಚುಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 

ಕಾರಡಗಿ ಗ್ರಾಮದಲ್ಲಿ ಕಸ ವಿಲೇವಾರಿ ಮಾಡಲು ಅಗತ್ಯ ಸ್ಥಳವನ್ನು ಗುರುತಿಸಿ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ತಿಳಿವಳಿಕೆ ನೀಡಬೇಕಾದ ಅಗತ್ಯವಿದೆ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

‘ಗ್ರಾಮದಲ್ಲಿ ಸ್ಥಳ ಅಭಾವ ಇರುವುದರಿಂದ ಜನರು ಕಸವನ್ನು ರಸ್ತೆಯಲ್ಲಿ ಹಾಕುತ್ತಾರೆ. ವಾರಕ್ಕೊಮ್ಮೆ ಸಂತೆ ನಡೆಯುತ್ತಿದೆ ಅಲ್ಲಿ ಗ್ರಾಮ ಪಂಚಾಯ್ತಿಯಿಂದ ಶುಲ್ಕ ವಸೂಲಿ ಮಾಡಲಾಗುತ್ತದೆ.ಈ ಹಣದಲ್ಲಿ ಕಸ ಸಂಗ್ರಹಕ್ಕೆ ಆದ್ಯತೆ ನೀಡಬೇಕಾಗಿದೆ’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !