ಮಂಗಳವಾರ, ಅಕ್ಟೋಬರ್ 20, 2020
23 °C

ಪೊಲೀಸ್‌ ರಕ್ಷಣೆ: ಪ್ರತಿಮೆಗೆ ಮಾಲಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು (ಸೆ.17) ತಾಲ್ಲೂಕಿನ ಆರೇಮಲ್ಲಾಪುರ ಗ್ರಾಮದಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಗ್ರಾಮಸ್ಥರು ವಿರೋಧಿಸಿದ್ದರಿಂದ ಗ್ರಾಮದ ಶರಣಬಸವೇಶ್ವರಮಠದ ಪೀಠಾಧಿಪತಿ ಪ್ರಣವಾನಂದರಾಮ ಸ್ವಾಮೀಜಿ ಭಾನುವಾರ ಪೊಲೀಸ್‌ ಬಂದೋ ಬಸ್ತ್‌ನಲ್ಲಿ ಮಾಲಾರ್ಪಣೆ ಮಾಡಿದರು.

ಮೋದಿ ಜನ್ಮ ದಿನದಂದು ಶಾಸಕ ಅರುಣಕುಮಾರ ಪೂಜಾರ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಂದಾಗ ಅವರ ಜೊತೆ ಪ್ರಣವಾನಂದರಾಮ ಸ್ವಾಮೀಜಿ ಕೂಡ ಇದ್ದರು. ಆಗ ಸ್ವಾಮೀಜಿ ಮಾಲಾರ್ಪಣೆಗೆ ಮುಂದಾದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.

ಆರೆಮಲ್ಲಾಪುರ ಗ್ರಾಮದ ಮರಾಠ ಸಮಾಜದ ತುಳಜಾಭವಾನಿ ದೇವಸ್ಥಾನ ನಿರ್ಮಾಣಕ್ಕೆ ಯಾರೂ ದುಡ್ಡು ಕೊಡಬೇಡಿ ಎಂದು ಹೇಳಿ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿ, ಅವಮಾನ ಮಾಡಿದ್ದರಿಂದ ಅವರಿಗೆ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ನೈತಿಕ ಹಕ್ಕಿಲ್ಲ ಎಂದು ಹೇಳಿ ಮರಾಠ ಸಮಾಜದ ಮುಖಂಡರು ಮತ್ತು ಗ್ರಾಮಸ್ಥರು ಅಂದು ವಿರೋಧ ವ್ಯಕ್ತಪಡಿಸಿದ್ದರು.

ಮಾಲಾರ್ಪಣೆ ಬಳಿಕ ಮಾತನಾಡಿದ ಪ್ರಣವಾನಂದ ರಾಮ ಸ್ವಾಮೀಜಿ, ‘ಕೆಲವರು ರಾಜಕೀಯ ಪಿತೂರಿ ಮಾಡಿ ಮೋದಿ ಅವರ ಜನ್ಮ ದಿನದಂದು ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹೋದಾಗ ಅಡ್ಡಿಪಡಿಸಿದ್ದರು. ನನಗೆ ಜೀವ ಬೆದರಿಕೆ ಇತ್ತು. ಕೂಡಲೇ ನನಗೆ ಮತ್ತು ಮಠಕ್ಕೆ ರಕ್ಷಣೆ ಕೊಡಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.