ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರ ಏಳ್ಗೆಗೆ ಟಿಎಪಿಸಿಎಂಎಸ್ ಸದಾ ಸಿದ್ಧ

ಟಿಎಪಿಸಿಎಂಎಸ್ ಉಪಾಧ್ಯಕ್ಷ ಯು.ಎಸ್. ಕಳಗೊಂಡದ
Published : 24 ಸೆಪ್ಟೆಂಬರ್ 2024, 14:38 IST
Last Updated : 24 ಸೆಪ್ಟೆಂಬರ್ 2024, 14:38 IST
ಫಾಲೋ ಮಾಡಿ
Comments

ಹಿರೇಕೆರೂರು: ‘ತಾಲ್ಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ ರೈತರ ಏಳ್ಗೆಗೆ ಸೇವೆ ಸಲ್ಲಿಸುತ್ತ ಪ್ರತಿ ವರ್ಷ ಅಭಿವೃದ್ಧಿ ಪಥದತ್ತ ಸಾಗಿ ಹೆಮ್ಮರವಾಗಿ ಬೆಳೆದ ಸಹಕಾರ ಸಂಘವಾಗಿದೆ’ ಎಂದು ಟಿಎಪಿಸಿಎಂಎಸ್ ಉಪಾಧ್ಯಕ್ಷ ಯು.ಎಸ್. ಕಳಗೊಂಡದ ಹೇಳಿದರು.

ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಯ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾ ಭವನದಲ್ಲಿ ನಡೆದ ಟಿಎಪಿಸಿಎಂಎಸ್‌ನ 63ನೇ ವಾರ್ಷಿಕ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಟಿಎಪಿಸಿಎಂಎಸ್ 1959 ರಲ್ಲಿ ದಿ. ಬಿ.ಜಿ. ಬಣಕಾರ ನೇತೃತ್ವದಲ್ಲಿ ತಾಲ್ಲೂಕಿನ ಸಹಕಾರಿಗಳ ಸಹಕಾರದಿಂದ 75 ಸದಸ್ಯರಿಂದ ₹ 7,845 ಬಂಡವಾಳದಿಂದ ಆರಂಭಗೊಂಡ ಸಂಘವು ಹೆಮ್ಮರವಾಗಿ ಬೆಳೆದು ರೈತರ ಪಾಲಿನ ವರದಾನವಾಗಿದೆ. ಗೊಬ್ಬರ ಡೀಸಲ್, ಪೆಟ್ರೋಲ್ ಮತ್ತು ರೈತರಿಗೆ ಕಾಲಕಾಲಕ್ಕೆ ವ್ಯವಸಾಯದ ಪೂರಕ ಸಾಮಗ್ರಿಗಳನ್ನು ಒದಗಿಸಿ ರಾಜ್ಯದಲ್ಲಿಯೇ ಮಾದರಿಯಾಗಿರುವ ಏಕೈಕ ಸಂಸ್ಥೆಯಾಗಿದೆ’ ಎಂದರು. ಪ್ರಧಾನ ವ್ಯವಸ್ಥಾಪಕ ಬಿ.ಜಿ. ಬಣಕಾರ, ವಾರ್ಷಿಕ ವರದಿ ಓದಿದರು.

ಸಭೆಯಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಎಸ್.ಬಿ. ತಿಪ್ಪಣ್ಣನವರ, ಆರ್.ಎಸ್.ಪಾಟೀಲ, ಮಹೇಶ ಗುಬ್ಬಿ, ಎನ್.ವೈ. ಲೆಕ್ಕಪ್ಪಳವರ, ಭೀಮಪ್ಪ ಯತ್ತಿನಹಳ್ಳಿ, ಹೂವಪ್ಪ ಕವಲಿ, ಎಸ್.ಆರ್. ಹೊಂಡದ, ಮಂಜುಳಾ ಬಾಳಿಕಾಯಿ, ಜೆ.ಬಿ. ಸನ್ನೇರ, ಎಂ.ಎಚ್. ಪಾಟೀಲ, ಸಿಇಎಸ್ ವಿದ್ಯಾಸಂಸ್ಥೆಯ ಮಾಜಿ ಅಧ್ಯಕ್ಷ ಜೆ.ಬಿ. ತಂಬಾಕದ, ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ, ಹನುಮಂತಪ್ಪ ಹಡಗದ, ಚಂದ್ರಶೇಖರಪ್ಪ ತುಮ್ಮಿನಕಟ್ಟಿ, ಪ್ರಾಚಾರ್ಯ ಎಸ್.ಬಿ. ಚನ್ನಗೌಡ್ರ, ಬಿ.ಪಿ. ಹಳ್ಳೇರ, ಉಪನ್ಯಾಸಕ ರಾಜು ಕರೇಗೌಡ್ರ, ಟಿಎಪಿಸಿಎಂಎಸ್‌ನ ಸಹಾಯಕ ವ್ಯವಸ್ಥಾಪಕ ಅರುಣಕುಮಾರ ಬಸನಗೌಡ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT