ಗುರುವಾರ , ಆಗಸ್ಟ್ 11, 2022
26 °C

ಪ್ರತಿಭಟನೆ ವೇಳೆ ಅವಘಡ: ಮೂವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಉದಯಪುರದ ಟೈಲರ್ ಕನ್ಹಯ್ಯ ಲಾಲ್‍ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಪೆಟ್ರೋಲ್‌ ಸುರಿದು ಟೈರ್‌ಗೆ ಬೆಂಕಿ ಹಚ್ಚುವಾಗ ಮೂವರು ಪ್ರತಿಭಟನಾಕಾರರಿಗೆ ಬೆಂಕಿ ತಗುಲಿ ಸಣ್ಣ ಪುಟ್ಟ ಗಾಯಗಳಾದವು. 

ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನಾ ವೇಳೆ ಉದ್ರಿಕ್ತ ಯುವಕರ ಗುಂಪು ಟೈರ್‌ ಸುಡಲು ಮುಂದಾದರು. ಆಗ ಪೊಲೀಸ್‌ ಸಿಬ್ಬಂದಿ ಟೈರ್‌ ಕಿತ್ತುಕೊಂಡು ದೂರ ಎಸೆದರು.

ಇದರಿಂದ ಕುಪಿತರಾದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಹರಿಹಾಯ್ದರು. ಕೆಲ ನಿಮಿಷಗಳ ನಂತರ ಪ್ರತಿಭಟನಾಕಾರರು ಮತ್ತೆ ಪೆಟ್ರೋಲ್‌ ಸುರಿದು ಟೈರ್‌ಗೆ ಬೆಂಕಿ ಹಚ್ಚಿದರು. ಈ ವೇಳೆ ಮೂವರು ಪ್ರತಿಭಟನಾಕಾರರ ಬಟ್ಟೆಗೆ ಬೆಂಕಿ ತಗುಲಿ ಆತಂಕದ ವಾತಾವರಣ ಉಂಟಾಯಿತು. ತಕ್ಷಣ ಅಲ್ಲಿ ನೆರೆದಿದ್ದವರು ಬೆಂಕಿಯನ್ನು ನಂದಿಸಿದ ಪರಿಣಾಮ ದೊಡ್ಡ ಅವಘಡ ತಪ್ಪಿತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು