ಶಾಲಾ ಅಂಗಳದಲ್ಲಿ ತಾರಾಲಯ: ಪುಳಕಿತಗೊಂಡ ವಿದ್ಯಾರ್ಥಿಗಳು

7
ಕುತೂಹಲದಿಂದ ಜ್ಞಾನ ವೃದ್ಧಿ

ಶಾಲಾ ಅಂಗಳದಲ್ಲಿ ತಾರಾಲಯ: ಪುಳಕಿತಗೊಂಡ ವಿದ್ಯಾರ್ಥಿಗಳು

Published:
Updated:
Deccan Herald

ಹಾವೇರಿ:‌ ಪ್ರಯೋಗಾತ್ಮಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಕುತೂಹಲ ಮೂಡಿಸಿ, ಜ್ಞಾನ ವೃದ್ಧಿಸಬಹುದು ಎಂದು ಸಂಚಾರಿ ತಾರಾಲಯದ ವ್ಯವಸ್ಥಾಪಕ ಮಲ್ಲಿಕಾರ್ಜುನ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ‘ಶಾಲಾ ಅಂಗಳದಲ್ಲಿ ತಾರಾಲಯ’ದಲ್ಲಿ ಅವರು ಮಾತನಾಡಿದರು.

ಈ ಹಿಂದೆ, ತಾರಾಲಯ ವೀಕ್ಷಣೆಗಾಗಿ ಬೆಂಗಳೂರು ಹಾಗೂ ಹೈದರಾಬಾದ್‌ಗೆ ಹೋಗಬೇಕಿತ್ತು. ಆದರೆ, ಸರ್ಕಾರವು ಎಲ್ಲ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳ ಜ್ಞಾನಕ್ಕಾಗಿ, ಸಂಚಾರಿ ತಾರಾಲಯ ಆರಂಭಿಸಿದ್ದು, ಪ್ರಾಯೋಗಿಕವಾಗಿ ತೋರಿಸಲಾಗುತ್ತಿದೆ. ಪುಸ್ತಕಕ್ಕೆ ಸಿಮೀತವಾಗಿದ್ದ ವಿಜ್ಞಾನ ಬೋಧನೆಯು ಪ್ರಯೋಗ, ಪ್ರಾತ್ಯಕ್ಷಿಕೆ ಮೂಲಕ ಕ್ರಿಯಾಶೀಲವಾಗಿದೆ ಎಂದರು.

ಖಗೋಳದ ಕುರಿತು ಕುತೂಹಲ ಸಹಜ. ಬೆಂಗಳೂರು, ಕಲ್ಬುರ್ಗಿ, ಬೆಳಗಾವಿ, ಮೈಸೂರು ವಿಭಾಗೀಯ ಕೇಂದ್ರಗಳಲ್ಲಿ ತಾರಾಲಯಗಳಿವೆ. ರಾಜ್ಯಾದ್ಯಂತ  5 ಸಂಚಾರಿ ತಾರಾಲಯ ವಾಹನಗಳಿದ್ದು, ಬೆಳಗಾವಿ ವಿಭಾಗಕ್ಕೆ 2 ನೀಡಲಾಗಿದೆ. ಇವುಗಳಲ್ಲಿ ತೆಲುಗು, ಮರಾಠಿ, ಉರ್ದು ಮತ್ತು ಕನ್ನಡ ಭಾಷೆಗಳಲ್ಲಿ ವಿವರಿಸಲಾಗುತ್ತದೆ. ಏಕಕಾಲಕ್ಕೆ 40 ಜನರು ವಿಕ್ಷಣೆ ಮಾಡಬಹುದು. ಇಲ್ಲಿವರೆಗೆ 2 ಲಕ್ಷ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದಿದ್ದಾರೆ ಎಂದರು.

ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಜಿ.ಗೋವಿಂದ ಸ್ವಾಮಿ ಮಾತನಾಡಿ, ಬಹಳ ವರ್ಷಗಳ ಹಿಂದಿನಿಂದಲೂ ಭಾರತದಲ್ಲಿ ಖಗೋಳ ಸಂಶೋಧನೆ ನಡೆಯುತ್ತಿದೆ. ಖಗೋಳ ಜ್ಞಾನ ಅವಶ್ಯವಾಗಿದ್ದು, ಎಲ್ಲರಿಗೂ ಸಂಚಾರಿ ತಾರಾಲಯ ವಿಕ್ಷಣೆ ಮಾಡಿಸಲಾಗುವುದು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಿಗೇರಿ, ಮುಖ್ಯೊಪಾದ್ಯಾಯ ಎಸ್‌. ಎಂ. ಪಡ್ನೀಶ್‌, ಆರ್‌. ಎಸ್‌. ಪಾಟೀಲ್‌, ಶಿಕ್ಷಕ ನಾಗರಾಜ ನಡುವಿನಮಠ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !