ಶಾಂತಗೊಂಡ ತುಂಗಭದ್ರೆ: ಸಹಜ ಸ್ಥಿತಿಯತ್ತ ಜನಜೀವನ

7

ಶಾಂತಗೊಂಡ ತುಂಗಭದ್ರೆ: ಸಹಜ ಸ್ಥಿತಿಯತ್ತ ಜನಜೀವನ

Published:
Updated:
Deccan Herald

ಕುಮಾರಪಟ್ಟಣ (ಹಾವೇರಿ ಜಿಲ್ಲೆ): ತುಂಗಾಭದ್ರಾ ನದಿ ಹರಿವಿನ ಪ್ರಮಾಣ ಇಳಿಮುಖವಾಗಿದ್ದು, ಅಸ್ತವ್ಯಸ್ತಗೊಂಡಿದ್ದ ತೀರದ ಜನಜೀವನವು ಗುರುವಾರ ಸಹಜ ಸ್ಥಿತಿಯತ್ತ ಮರಳುತ್ತಿದೆ. 

ಭಾರಿ ಮಳೆ ಹಾಗೂ ಭದ್ರಾ ಜಲಾಶಯದಿಂದ ನೀರು ಹೊರ ಬಿಟ್ಟ ಕಾರಣ, ಮೂರು ದಿನಗಳಿಂದ ನದಿ ಉಕ್ಕಿ ಹರಿದಿತ್ತು. ಹಾವೇರಿ ಜಿಲ್ಲೆಯಲ್ಲಿನ ನದಿ ಪಾತ್ರದ ಜಮೀನುಗಳು, ಜನವಸತಿಗೆ ನೀರು ನುಗ್ಗಿ ಪ್ರವಾಹದ ಭೀತಿ ಹೆಚ್ಚಿತ್ತು. 

ನದಿ ದಂಡೆಯ ಮುದೇನೂರು, ಮಾಕನೂರು, ಕವಲೆತ್ತು, ಕೊಡಿಯಾಲ ಹೊಸಪೇಟೆ, ನಲವಾಗಲ, ಐರಣಿ, ಹಿರೇಬಿದರಿ ಗ್ರಾಮಗಳ ಹೊಲಗಳಿಗೆ ನೀರು ನುಗ್ಗಿದ್ದು ಸೇವಂತಿಗೆ, ಭತ್ತ, ತರಕಾರಿ ಮತ್ತಿತರ ಬೆಳೆಗಳಿಗೆ ಹಾನಿಯಾಗಿವೆ. 

ನದಿ ನೀರನ್ನು ನೋಡಲು ಸೇತುವೆಗಳತ್ತ ಧಾವಿಸುತ್ತಿದ್ದ ಜನರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಗಿತ್ತು. ಸೆಲ್ಫಿ ಸಾಹಸಗಳೂ ಅಲ್ಲಲ್ಲಿ ಕಂಡುಬಂದಿತ್ತು.   

ನದಿ ತೀರ ಹಾಗೂ ನೆರೆ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ ಪರಿಹಾರ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ್ದಾರೆ. ಅಗತ್ಯ ಕ್ರಮಗಳ ಬಗ್ಗೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಜಲಾವೃತಗೊಂಡಿದ್ದ ಜಮೀನುಗಳಲ್ಲಿ ನೀರು ಕಡಿಮೆಯಾದ ಬಳಿಕ ರೈತರು ಮತ್ತೆ ನಾಟಿ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನೀಲಕಂಠಪ್ಪ ಕುಸುಗೂರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !