ಗುತ್ತಲ (ಹಾವೇರಿ ಜಿಲ್ಲೆ): ದುರ್ವಾಸನೆ ಬೀರುತ್ತಿದ್ದ ತುಂಗಭದ್ರಾ ನದಿಯ ನೀರನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಶಿವಾನಂದ ದೊಡ್ಡಮನಿ ಮತ್ತು ಸಿಬ್ಬಂದಿ ಬುಧವಾರ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕೊಂಡೊಯ್ದರು.
‘ದುರ್ವಾಸನೆ ಬೀರುತ್ತಿದೆ ತುಂಗಭದ್ರಾ ನೀರು’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ, ವರದಿ ಪ್ರಕಟವಾದ ದಿನವೇ ತುಂಗಭದ್ರಾ ನದಿಗೆ ಸಿಬ್ಬಂದಿ ಕಳುಹಿಸಿ ಮಲಿನಗೊಂಡ ನೀರನ್ನು ಸಂಗ್ರಹಿಸಿದರು.
‘ಧಾರವಾಡ ಪ್ರಯೋಗಾಲಯಕ್ಕೆ ನದಿಯ ನೀರನ್ನು ಪರಿಶೀಲನೆಗೆ ಕಳುಹಿಸಿಕೊಡಲಾಗಿದೆ. ಪ್ರಯೋಗಾಲಯದ ವರದಿ ಬಂದ ಮೇಲೆ ತುಂಗಭದ್ರಾ ನದಿಯ ನೀರು ಕುಡಿಯಲಿಕ್ಕೆ ಯೋಗ್ಯವೇ ಅಥವಾ ಇಲ್ಲವೇ ಎಂಬುದನ್ನು ತಿಳಿಸಲಾಗುವುದು’ ಎಂದು ಮಾಲಿನ್ಯ ನಿಯಂತ್ರಣಾ ಮಂಡಳಿಯ ಅಧಿಕಾರಿ ಡಾ.ಸುಧಾ ಎಂ.ಕೆ. ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಒಂದು ತಿಂಗಳಿಂದ ತುಂಗಭದ್ರಾ ನದಿಯ ನೀರು ದುರ್ವಾಸನೆ ಬೀರುತ್ತಿವೆ ಎಂದು ಹಲವಾರು ಗ್ರಾಮಗಳ ಜನರು ದೂರಿದ್ದಾರೆ. ಯಾವ ಕಾರಣಕ್ಕೆ ನೀರು ದುರ್ವಾಸನೆ ಬೀರುತ್ತಿದೆ ಎಂಬ ಬಗ್ಗೆ ನಿಖರ ಕಾರಣ ಪತ್ತೆಯಾಗಿಲ್ಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.