ಮನುಷ್ಯ ಜೀವನದ ಹರುಷ ನಮ್ಮ ಬದುಕಿನ ಶೈಲಿಯ ಮೇಲೆ ಅವಲಂಬಿಸಿರುತ್ತದೆಯೇ ಹೊರತು ನಮ್ಮ ಮಾತುಗಳ ಮೇಲಲ್ಲ. ನಾವು ಒಳ್ಳೆಯವರೆಂಬುದನ್ನು ಸಾಬೀತು ಪಡಿಸುವ ಸಲುವಾಗಿ ಗೌರವ, ಸ್ಥಾನಮಾನಕ್ಕಾಗಿ ನಮ್ಮನ್ನು ನಾವು ಹೊಗಳಿಕೊಳ್ಳುವ ಭರದಲ್ಲಿ ಬೇರೆಯವರ ಮೇಲೆ ದೋಷಾರೋಪ ಮಾಡುವ ಪ್ರವೃತ್ತಿಯು ಬದುಕಿನ ಸಂತೆಯಲ್ಲಿ ನಮ್ಮನ್ನು ನಾವು ಹರಾಜಿಗಿಟ್ಟಂತೆ. ‘ಗುಂಪಿನಲ್ಲಿ ಗೋವಿಂದ’ ಎನ್ನುತ್ತಾ ಪರನಿಂದೆ ಮಾಡುವ ಮನಸ್ಥಿತಿಯಿಂದ ನಾವು ಹೊರಬರಬೇಕು.