ಶನಿವಾರ, ಮೇ 21, 2022
23 °C
ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

‘ಕಾನೂನಿಗೆ ಸೆಡ್ಡು ಹೊಡೆಯುವವರನ್ನು ನಿಯಂತ್ರಿಸುತ್ತೇವೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರೇಕೆರೂರು (ಹಾವೇರಿ): ‘ಕೆಲವರು ಮತೀಯವಾದ ಇಟ್ಟುಕೊಂಡು ರಾಷ್ಟ್ರೀಯವಾದಕ್ಕೆ ಸವಾಲು ಹಾಕುತ್ತಿದ್ದಾರೆ. ಇದನ್ನು ಸ್ಪಷ್ಟವಾಗಿ ನಿಯಂತ್ರಣಕ್ಕೆ ತರುತ್ತೇವೆ. ಯಾರೂ ಕೂಡ ಕಾನೂನಿಗಿಂತ ಮೇಲಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

ಪಟ್ಟಣದಲ್ಲಿ ಡಿ.ದೇವರಾಜ ಅರಸು ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಶುಕ್ರವಾರ ಬಂದ ಸಂದರ್ಭ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕಾನೂನಿಗೆ ಸೆಡ್ಡು ಹೊಡೆಯುವವರನ್ನು ನಿಯಂತ್ರಣ ಮಾಡುವ ಅಧಿಕಾರ ಸರ್ಕಾರಕ್ಕಿದೆ, ಅದನ್ನು ಮಾಡಿದ್ದೇವೆ ಎಂದರು. 

ಕರಾವಳಿ ಭಾಗದಲ್ಲಿ ಕೆಲ ಸಂಘಟನೆಗಳಿಂದ ತಾಲಿಬಾನ್‌ ಮಾದರಿ ಸಂಸ್ಕೃತಿ ಹೇರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿ, ‘ಸಂವಿಧಾನ ಬದ್ಧವಾಗಿ ರಾಜ್ಯದ ಹೈಕೋರ್ಟ್‌ ಸಮವಸ್ತ್ರ ಪಾಲಿಸಿ ಎಂದು ಹೇಳಿದೆ. ಕೋರ್ಟ್‌ ಆದೇಶದಂತೆ, ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ’ ಎಂದು ಸರ್ಕಾರ ಕೂಡ ಈಗಾಗಲೇ ಆದೇಶ ಕೊಟ್ಟಿದೆ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು