ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಗುಂಡಿನ ಕಾಳಗ: ಉಗ್ರ, ಯೋಧ, ಪೊಲೀಸ್‌ ಸಿಬ್ಬಂದಿ ಸಾವು

Last Updated 24 ಏಪ್ರಿಲ್ 2018, 11:20 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್‌ ಪ್ರದೇಶದಲ್ಲಿ ಉಗ್ರರು ಹಾಗೂ ರಕ್ಷಣಾ ಪಡೆಗಳ ನಡುವಿನ ಗುಂಡಿನ ಕಾಳಗದಲ್ಲಿ ಯೋಧ, ಪೊಲೀಸ್‌ ಸಿಬ‌್ಬಂದಿ ಹುತಾತ್ಮರಾಗಿದ್ದು, ಒಬ್ಬ ಉಗ್ರ ಹತ್ಯೆಯಾಗಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಪೊಲೀಸ್‌ ಅಧಿಕಾರಿಯೊಬ್ಬರು, ಇಲ್ಲಿನ ಲಾಮ್‌ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯಲು ಸಿಆರ್‌ಪಿಎಫ್‌ ಅರೆಸೇನಾ ಪಡೆ ಹಾಗೂ ಪೊಲೀಸ್‌ ಸಿಬ್ಬಂದಿ ಜಂಟಿಯಾಗಿ ಇಂದು(ಮಂಗಳವಾರ) ಮುಂಜಾನೆ ಕೂಂಬಿಂಗ್‌ ಮತ್ತು ಹುಡುಕು ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ಉಗ್ರರು ಎಕೆ–47 ರೈಫಲ್‌ಗಳಿಂದ ದಾಳಿ ಆರಂಭಿಸಿದರು. ಪ್ರತಿಯಾಗಿ ರಕ್ಷಣಾ ಪಡೆಗಳೂ ದಾಳಿ ನಡೆಸಿದವು ಎಂದು ತಿಳಿಸಿದ್ದಾರೆ.

‘ದಾಳಿಯಿಂದಾಗಿ ಯೋಧ ಹಾಗೂ ಪೊಲೀಸ್‌ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಶ್ರೀನಗರದಲ್ಲಿರುವ ಸೇನೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಇಬ್ಬರೂ ಮೃತಪಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.

ತ್ರಾಲ್‌ ಪ್ರದೇಶದಲ್ಲಿ ಉಗ್ರರು ಬಲವಾದ ಹಿಡಿತ ಹೊಂದಿದ್ದಾರೆ. ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯ ಕಮಾಂಡರ್‌ ಬರ್ಹಾನ್‌ ವಾನಿ, ಅಲ್‌ಖೈದಾ ಉಗ್ರ ಝಾಕೀರ್‌ ಮೂಸಾ ಇಲ್ಲಿಯವರೇ ಆಗಿರುವುದರಿಂದ ಉಗ್ರ ಚಟುವಟಿಕೆಗಳೂ ಸಕ್ರಿಯವಾಗಿವೆ.

ಸದ್ಯ ಘಟನಾ ಸ್ಥಳಕ್ಕೆ ಹೆಚ್ಚುವರಿ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT