ಹಾವೇರಿ: ‘ಪ್ರಯಾಣದ ಸಂದರ್ಭದಲ್ಲಿ ಯಾರೋ ನನ್ನ ಚಿನ್ನದ ಸರ ಕದ್ದಿದ್ದಾರೆ’ ಎಂದು ಆರೋಪಿಸಿದ ಮಹಿಳೆಯೊಬ್ಬರು, ಸಹ ಪ್ರಯಾಣಿಕರಿದ್ದ ಬಸ್ಸಿನ ಸಮೇತ ಠಾಣೆಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಹಾನಗಲ್ ತಾಲ್ಲೂಕಿನ ಹಿರೇಬಾಸೂರು ಗ್ರಾಮದ ಮೀನಾಕ್ಷಿಅವರು ಅಡವಿಟ್ಟಿದ್ದ ಚಿನ್ನ ಬಿಡಿಸಿಕೊಂಡು ಶುಕ್ರವಾರ ತಮ್ಮೂರಿಗೆ ಹೊರಟಿದ್ದರು. ವಾಕರಸಾಸಂ (ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಅವರ ಪರ್ಸ್ನಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಯಾರೋ ಕಳ್ಳರು ಕದ್ದಿದ್ದರು.

ಬಸ್ನಲ್ಲಿ ಹುಡುಕಾಡಿದ್ದ ಮೀನಾಕ್ಷಿ ಅವರಿಗೆ ಸರ ಸಿಕ್ಕಿರಲಿಲ್ಲ. ಸಹ ಪ್ರಯಾಣಿಕರನ್ನು ವಿಚಾರಿಸಿದಾಗ, ಯಾರೊಬ್ಬರೂ ಪ್ರತಿಕ್ರಿಯೆ ನೀಡಿರಲಿಲ್ಲ. ‘ನನ್ನ ಚಿನ್ನದ ಸರವನ್ನು ಬಸ್ನಲ್ಲಿರುವವರೇ ಕಳ್ಳತನ ಮಾಡಿದ್ದಾರೆ’ ಎಂದು ಆರೋಪಿಸಿದ್ದ ಮಹಿಳೆ, ‘ಪೊಲೀಸ್ ಠಾಣೆಗೆ ಹೋಗೋಣ’ ಚಾಲಕ ಹಾಗೂ ನಿರ್ವಾಹಕರಿಗೆ ಹೇಳಿದ್ದರು.

ಅದಕ್ಕೆ ಒಪ್ಪಿದ್ದ ಚಾಲಕ, ಮಹಿಳೆ ಹಾಗೂ ಸಹ ಪ್ರಯಾಣಿಕರ ಸಮೇತ ಹಾವೇರಿ ಶಹರ ಠಾಣೆಗೆ ಬಸ್ ತಂದಿದ್ದರು. ಠಾಣೆಯಲ್ಲಿದ್ದ ಪೊಲೀಸರು, ಮಹಿಳೆಯ ದೂರು ಆಲಿಸಿದರು. ಸಹ ಪ್ರಯಾಣಿಕರ ಪರಿಶೀಲನೆ ನಡೆಸಿದರು. ಆದರೆ, ಯಾವುದೇ ಚಿನ್ನದ ಸರ ಸಿಕ್ಕಿಲ್ಲ.

‘ಮಹಿಳೆ ಆರೋಪದಂತೆ ಬಸ್ನಲ್ಲಿದ್ದ ಎಲ್ಲರನ್ನೂ ಪರಿಶೀಲನೆ ನಡೆಸಿದರೂ ಯಾವುದೇ ಚಿನ್ನ ಸಿಕ್ಕಿಲ್ಲ. ಮಹಿಳೆಯು ನಗರದ ಹಲವು ಕಡೆ ಓಡಾಡಿದ್ದಾರೆ. ಮಾರ್ಗಮಧ್ಯೆ ಎಲ್ಲಿಯೋ ಸರ ಕಳೆದುಕೊಂಡಿರುವ ಮಾಹಿತಿ ಇದೆ. ಎರಡು ಗಂಟೆಗಳ ನಂತರ, ಬಸ್ ಸಮೇತ ಪ್ರಯಾಣಿಕರನ್ನು ಠಾಣೆಯಿಂದ ಕಳುಹಿಸಿ ಕೊಡಲಾಗಿದೆ. ಮಹಿಳೆಯಿಂದ ದೂರು ಪಡೆದು, ಚಿನ್ನದ ಸರಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಇನ್ಸ್ಪೆಕ್ಟರ್ ಮೋತಿಲಾಲ್ ಪವಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.