ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಪ್ರಾತಿನಿಧ್ಯ ಸಿಗದ ಕ್ಷೇತ್ರ

ಮಹಿಳಾ ಮತದಾರರ ನೋಂದಣಿಯಲ್ಲಿ ಈ ಬಾರಿ ಹೆಚ್ಚಳ
Last Updated 5 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಹಾವೇರಿ: ಕ್ಷೇತ್ರದಲ್ಲಿ ಕಳೆದ ಬಾರಿ (2014) ಚುನಾವಣೆಗಿಂತ ಈ ಬಾರಿ 1,43,869 ಮತದಾರರು ಹೆಚ್ಚಾಗಿದ್ದು, ಈ ಪೈಕಿ
ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ಪುರಷ ಮತದಾರರು 62,154 ಹೆಚ್ಚಾಗಿದ್ದರೆ, ಲಿಂಗತ್ವ ಅಲ್ಪಸಂಖ್ಯಾತರ ಸಂಖ್ಯೆ (6) ಕಡಿಮೆಯಾಗಿದೆ. ಆದರೆ, 81,721 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ.

ಒಟ್ಟು ಮತದಾರರ ಪೈಕಿ ಈ ಬಾರಿ ಶೇ 48.94ರಷ್ಟು ಮಹಿಳೆಯರಿದ್ದರೆ, ಕಳೆದ ಬಾರಿ (2014) ಶೇ 48.21ರಷ್ಟು ಇದ್ದರು. ಇದರಿಂದ ಪುರುಷ ಮತ್ತು ಮಹಿಳಾ ಲಿಂಗಾನುಪಾತದ ಅಂತರ ಇಳಿಕೆ ಆಗಿದ್ದು, ಅಭಿವೃದ್ಧಿ ಸೂಚಕವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಹಾವೇರಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಹಾವೇರಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದ್ದರೆ, ಗದಗದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿದ್ದಾರೆ.

ಮಹಿಳೆಯರಿಗೆ ಅವಕಾಶವಿಲ್ಲ:

ಕ್ಷೇತ್ರದಲ್ಲಿ ಈ ತನಕ 16 ಚುನಾವಣೆಗಳು ನಡೆದಿದ್ದು, ಮಹಿಳೆಯರು ಸಂಸದರಾಗಿಲ್ಲ. 2008ರ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ‘ಹಾವೇರಿ ಲೋಕಸಭಾ ಕ್ಷೇತ್ರ’ವು ಉದಯಿಸಿದ್ದು, 2009ರ ಚುನಾವಣೆಯಲ್ಲಿ ಪ್ರೇಮಾ ಪಾಟೀಲ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಆದರೆ, ಆ ಬಳಿಕಇಲ್ಲಿ ತನಕ ಕಣದಲ್ಲಿ ಮಹಿಳಾ ಅಭ್ಯರ್ಥಿಗಳಿಲ್ಲ. 2014ರಲ್ಲಿ ಮಹಿಳಾ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಿದ್ದರೂ, ಬಳಿಕ
ವಾಪಸ್ ಪಡೆದಿದ್ದರು. ಈ ಬಾರಿ ಯಾರೂ ನಾಮಪತ್ರ ಸಲ್ಲಿಸಿಲ್ಲ. ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಯಾವುದೇ ಪ್ರಮುಖ ರಾಜಕೀಯ ಪಕ್ಷಗಳು ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ.

ಇನ್ನಷ್ಟು ಮಾಹಿತಿ:

ಜಿಲ್ಲೆಯಲ್ಲಿ ಒಟ್ಟು 12.39 ಲಕ್ಷ ಮತದಾರರಿದ್ದು, ಈ ಪೈಕಿ 5.97 ಲಕ್ಷ ಮಹಿಳೆಯರು. ಈ ಬಾರಿ ಮಹಿಳೆಯರೇ ಕಾರ್ಯನಿರ್ವಹಿಸುವ 14 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಹಿಳಾ ಸಾಕ್ಷರತಾ ಪ್ರಮಾಣ ಶೇ 70.5ರಷ್ಟು ಇದೆ. ಲಿಂಗಾನುಪಾತ ಸಾವಿರಕ್ಕೆ 950 ಇದೆ. ಲಿಂಗಾನುಪಾತ 2001ಕ್ಕೆ (944) ಹೋಲಿಸಿದರೆ ಈಗ 6ರಷ್ಟು ಹೆಚ್ಚಿದೆ.

ಪ್ರಮುಖ ಹುದ್ದೆಗಳು:

ಪ್ರಸ್ತುತ ಪ್ರಮುಖ ಹುದ್ದೆಗಳ ಪೈಕಿಸಂಸದ, ಶಾಸಕ, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಯಾವುದೇ ಹುದ್ದೆಯಲ್ಲಿ ಮಹಿಳೆಯರಿಲ್ಲ. ಆದರೆ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಚ್.ಎಸ್. ರೇಣುಕಾದೇವಿ, ಜಿಲ್ಲಾ ಪಂಚಾಯ್ತಿ ಸಿಇಒ ಆಗಿ ಕೆ. ಲೀಲಾವತಿ
ಕಾರ್ಯನಿರ್ವಹಿಸುತ್ತಿದ್ದಾರೆ.

ಜಿಲ್ಲೆಯಿಂದ ವಿಧಾನಸಭೆಗೆ ಆಯ್ಕೆಯಾದ ಮಹಿಳೆಯರು

ವರ್ಷ; ಅಭ್ಯರ್ಥಿ; ಕ್ಷೇತ್ರ

1957;ಸಿದ್ದಮ್ಮ ಮೈಲಾರಪಾಟೀಲ;ಹಾವೇರಿ

1962;ಸಿದ್ದಮ್ಮ ಮೈಲಾರಪಾಟೀಲ;ಬ್ಯಾಡಗಿ

1957;ಯಲ್ಲವ್ವ ಸಾಂಬ್ರಾಣಿ;ರಾಣೆಬೆನ್ನೂರು

1962;ಯಲ್ಲವ್ವ ಸಾಂಬ್ರಾಣಿ;ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT