ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಣ್ಣು ಸಮಾಜದ ಕಣ್ಣು’

Last Updated 11 ಮಾರ್ಚ್ 2023, 16:01 IST
ಅಕ್ಷರ ಗಾತ್ರ

ಹಾವೇರಿ: ‘ಹೆಣ್ಣು ಸಮಾಜದ ಕಣ್ಣು. ಇತ್ತೀಚಿನ ದಿನಗಳಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ದಾಪುಗಾಲಿಡುತ್ತಿದ್ದಾಳೆ. ಮಹಿಳೆ ಅಬಲೆಯಿಂದ ಸಬಲೆಯಾಗುವತ್ತ ದಿಟ್ಟ ಹೆಜ್ಜೆ ಇಡುತ್ತಿದ್ದಾಳೆ. ಮಹಿಳೆಯರ ಹಕ್ಕುಗಳನ್ನು ಬೆಂಬಲಿಸಲು ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಘೋಷಿಸಲಾಯಿತು’ ಎಂದು ಹಾವೇರಿಯ ಗೆಳೆಯರ ಬಳಗದ ಮುಖ್ಯಶಿಕ್ಷಕಿ ಪುಷ್ಪಾವತಿ ಕೆರೂಡಿ ಹೇಳಿದರು.

ನಗರದ ಹುಕ್ಕೇರಿಮಠದ ಅಕ್ಕನ ಬಳಗದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಮಹಿಳೆ ತ್ಯಾಗಮೂರ್ತಿ, ಕ್ಷಮಯಾಧರಿತ್ರಿ ಎಂದು ಬಣ್ಣಿಸಿದರು.

ನಮ್ಮದು ಮೊದಲ ಪುರುಷ ಪ್ರಧಾನ ದೇಶವಾಗಿತ್ತು. ಆದರೆ ಇಂದು ಮಹಿಳಾ ಪ್ರಧಾನ ದೇಶವಾಗುತ್ತಿದೆ. ಅಂದು ಕಚೇರಿಗಳಲ್ಲಿ ತಂದೆ ಅಥವಾ ಗಂಡನ ಹೆಸರನ್ನು ನೋಂದಾಯಿಸಬೇಕಾಗಿತ್ತು. ಇಂದು ತಾಯಿಯ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಬೇಕೆಂದು ಸರ್ಕಾರದ ಆದೇಶಿಸಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಲಿಂಗಭೇದ, ಜಾತಿ ಭೇದವನ್ನು ತೊಡೆದು ಹಾಕಿ, ಸಮ ಸಮಾಜಕ್ಕಾಗಿ ಶ್ರಮಿಸಿದರು. ಪುರುಷರಿಗೆ ಸಮಾನವಾದ ಅವಕಾಶಗಳನ್ನು ಮಹಿಳೆಯರಿಗೂ ಕೊಟ್ಟರು ಎಂದರು.

ಹುಕ್ಕೇರಿ ಮಠದ ಅಕ್ಕನ ಬಳಗದ ಅಧ್ಯಕ್ಷೆ ಚಂಪಾ ಎಂ. ಹುಣಸಿಕಟ್ಟಿ ಮಾತನಾಡಿದರು. ಅಕ್ಕಮಹಾದೇವಿ ಅಂಕಲ ಕೋಟಿ, ಕಸ್ತೂರಮ್ಮ ಯಾವಗಲ್, ಕಸ್ತೂರಮ್ಮ ಮಹಾರಾಜಪೇಟೆ, ಡಾ.ಸವಿತಾ ಅವರನ್ನು ಸನ್ಮಾನಿಸಲಾಯಿತು.

ವನಿತಾ ಮಾಗನೂರು ನಿರೂಪಿಸಿದರು. ಶಿವಲೀಲಾ ಸಿರಸಪ್ಪನವರು ಪ್ರಾರ್ಥಿಸಿದರು. ಶೋಭಾ ಮುಂಡರಗಿ ಸ್ವಾಗತಿಸಿದರು. ಅಕ್ಕನ ಬಳಗದ ಸ್ಮಿತಾ ತಟಪಟ್ಟಿ, ಲೀಲಾವತಿ ಭೋಜರಾಜ ಪಾಟೀಲ, ಲಲಿತಕ್ಕಾ ಹೊರಡಿ, ಸರೋಜಾ, ತೇಜಸ್ವಿನಿ ಕಾ ಶೆಟ್ಟಿ, ಗಿರಿಜಾ ಮುಷ್ಟಿ, ಸ್ಮಿತಾ ಕುರುಬಗೊಂಡ, ಭಾರತಿ ಯಾವಗಲ್, ಲಲಿತಾ ಹುಲಿಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT