ಹಿರೇಕೆರೂರು: ಗ್ರಾಮೀಣ ಭಾಗದಲ್ಲಿನ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸರ್ಕಾರ ಸಂಜೀವಿನಿ ಯೋಜನೆ ಜಾರಿಗೆ ತಂದಿದೆ. ಈ ಮೂಲಕ ಮಹಿಳೆಯರಿಗೆ ವೃತ್ತಿ ತರಬೇತಿ ನೀಡುವ ಜತೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಂಜೀವಿನಿ ತಾಲ್ಲೂಕು ಮಟ್ಟದ ಒಕ್ಕೂಟದ ಉದ್ಘಾಟನೆ ಮತ್ತು ಸಂಜೀವಿನಿ-ಜೀವನೋಪಾಯ ಚಟುವಟಿಗಳ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಮಹಿಳೆಯರಗೋಸ್ಕರ ಅನೇಕ ಯೋಜನೆಗಳನ್ನು ಸಂಜೀವಿನಿ ಒಕ್ಕೂಟಗಳಿಂದ ತಲುಪಿಸುವ ಉದ್ದೇಶವಾಗಿದೆ. ದುಡಿಮೆ ಮಾಡುವ ಮಹಿಳೆಯರಿಗಾಗಿ ಸ್ವ-ಸಹಾಯ ಗುಂಪುಗಳಲ್ಲಿ ಸಾಲ ರೂಪದಲ್ಲಿ ಹಣದ ಸಹಾಯ ಮಾಡಿದರೆ ಸಾಕಷ್ಟು ಆರ್ಥಿಕತೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಸಂಜೀವಿನಿ ಮಹಿಳಾ ಒಕ್ಕೂಟಗಳು ತೋರಿಸಿಕೊಟ್ಟಿದೆ. ಸಂಜೀವಿನಿ ಯೋಜನೆ ಹರಿದು ಹಂಚಿಹೋಗಿದ್ದ ಸ್ವ ಸಹಾಯ ಸಂಘಗಳನ್ನು ಒಂದು ವೇದಿಕೆ ಅಡಿ ತರುವ ಪ್ರಯತ್ನ ಇದಾಗಿದ್ದು, ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಪ್ರತಿ ಸ್ತ್ರೀಯರನ್ನು ಈ ಯೋಜನೆಯಡಿ ತರುವ ಉದ್ದೇಶ ಹೊಂದಲಾಗಿದೆ ಎಂದರು.
ದುಡಿಯುವ ಮಹಿಳೆಯರಿಗಾಗಿ ಸ್ವ-ಸಹಾಯ ಗುಂಪುಗಳಲ್ಲಿ ಸಾಲ ರೂಪದಲ್ಲಿ ಹಣದ ಸಹಾಯ ಮಾಡಿದರೆ ಮಹಿಳೆಯರು ಆರ್ಥಿಕತೆ ಹೆಚ್ಚಿಸಿಕೊಳ್ಳಬಹುದು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸರ್ಕಾರ ಸಂಜೀವಿನಿ ಯೋಜನೆ ಜಾರಿಗೆ ತಂದಿದೆ. ಮಹಿಳೆಯರಿಗೆ ವೃತ್ತಿ ತರಬೇತಿ ನೀಡುವ ಜತೆಗೆ ಆರ್ಥಿಕ ನೆರವು ನೀಡುತ್ತದೆ ಎಂದರು.
ನಂತರ ಒಕ್ಕೂಟದ ಸದಸ್ಯರ ಕುಂದು ಕೊರತೆಗಳನ್ನು ಆಲಿಸಿ ಸದಸ್ಯರ ಕೆಲವೊಂದು ಕುಂದು ಕೊರತೆಗಳನ್ನು ಸಭೆಯಲ್ಲಿ ಸರಿಪಡಿಸಿ ಸರ್ಕಾರದ ಮಟ್ಟದಲ್ಲಿ ಈಡೇರಿಸಬೇಕಾದ ಬೇಡಿಕೆಗಳನ್ನು ಮುಂದಿನ ಅಧಿವೇಶನದಲ್ಲಿ ಚರ್ಷಿಸುವೇ ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯತ್ ಯೋಜನಾ ಅಧಿಕಾರಿ ಎಸ್.ಜಿ.ಕೊರವರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಬಿ.ಎಂ, ಟಿ.ಆರ್. ಮಲ್ಲಾಡದ, ಮ ನರೇಗಾ ಸಹಾಯಕ ನಿರ್ದೇಶಕ ಜಿ.ಜಿ. ನಾಯಕ, ಸಮತಾ ಐರಣಿ, ಶಂಭು ಕಡ್ಲಿಕೊಪ್ಪ, ನಂಜುಂಡೇಶ್ಚರ ಎನ್., ಭರತಕುಮಾರ್ ಎಚ್., ಬಸವಣ್ಯೆಮ್ಮ ಚಲವಾದಿ, ಯಶೋದಮ್ಮ ಬಾರ್ಕಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.