ಕೆಂಭಾವಿ: ‘ದೇಸಿ ಕ್ರೀಡೆ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳುವುದರಿಂದ ಸ್ಥಳಿಯ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ’ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಎನ್ಆರ್ ವೈಭವ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಬಡ್ಡಿ ಒಂದು ಗ್ರಾಮೀಣ ಸೊಗಡಿನ ಕ್ರೀಡೆ. ಹಿಂದಿನಿಂದಲೂ ಕಬಡ್ಡಿಗೆ ತನ್ನದೆ ಮಹತ್ವವಿದೆ. ಕಬಡ್ಡಿಯಿಂದ ಅನೇಕ ಸ್ಥಳಿಯ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಎಲ್ಲ ಧರ್ಮ, ಜಾತಿ, ಮತ ಪಂಥವನ್ನು ಒಟ್ಟುಗೂಡಿಸುವ ಕ್ರೀಡೆಯಾಗಿದೆ. ಎನ್ಆರ್ ದಾವಲಸಾಬ ಅವರ ಸ್ಮರಣಾರ್ಥ ಇಂತಹದೊಂದು ಟೂರ್ನಿ ಆಯೋಜಿಸಿರುವುದು ಸೂಕ್ತವಾಗಿದೆ’ ಎಂದು ಹೇಳಿದರು.

ಯುವ ಮುಖಂಡ ಆದಿತ್ಯಗೌಡ ಪಾಟೀಲ ಮಾತನಾಡಿ, ‘ಎಲ್ಲ ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ. ಗೆದ್ದರೆ ಹಿಗ್ಗದೆ, ಸೋತರೆ ಕುಗ್ಗದೆ ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಯನ್ನು ಆನಂದಿಸಿ’ ಎಂದರು.

ನಂದಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಸಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಈ ಸಂದರ್ಭದಲ್ಲಿ ಚನ್ನಬಸವ ಶಿವಾಚಾರ್ಯರು, ಆಶ್ರಯ ಕಮಿಟಿ ಅಧ್ಯಕ್ಷ ಶರಣಬಸವ ಡಿಗ್ಗಾವಿ, ಸುರೇಶಗೌಡ ಪಾಟೀಲ, ರಾಘು ದೊರೆ, ರಹೆಮಾನ ಪಟೇಲ್, ಸಯ್ಯದ ಹುಸೇನ, ಸಾಹೇಬಲಾಲ ಆಂದೇಲಿ, ಶಿವಪ್ಪ ಕಂಬಾರ, ಶಿವಪ್ಪ ಕಟ್ಟಿಮನಿ, ಬಸಯ್ಯಸ್ವಾಮಿ, ಇಮ್ರಾನ ಪಟೇಲ್, ಮಹಿಬೂಬ ನಾಶಿ, ಮೈನೂದ್ದೀನ ನಾಶಿ, ಶರಣು ಸೇರಿದಂತೆ ಅನೇಕರಿದ್ದರು.

ಗಿರಿರಾಜ ಶಹಾಪುರ ನಿರೂಪಿಸಿದರು. ಸಂಗಮೇಶ ಸ್ವಾಗತಿಸಿದರು. ರೇವಣಸಿದ್ದಯ್ಯ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-30-553858306

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.