ಹಾನಗಲ್: ‘ಚಿತ್ರದುರ್ಗದಲ್ಲಿ ಮೇ 9ರಂದು ‘ಬಿ.ಎಸ್.ಯಡಿಯೂರಪ್ಪನವರ ಅಭಿಮಾನೋತ್ಸವ’ ಸಮಾರಂಭ ಜರುಗಲಿದೆ. ಈ ಸಮಾರಂಭಕ್ಕೆ ಮಠಾಧೀಶರನ್ನು ಆಮಂತ್ರಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಂಗಳವಾರ ಅಕ್ಕಿಆಲೂರಿಗೆ ಆಗಮಿಸಿದ್ದರು.

ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಮತ್ತು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮುತ್ತಿನಕಂತಿಮಠದಲ್ಲಿ ಸೇರಿದ್ದ ಸುಮಾರು 25 ಮಠಾಧೀಶರನ್ನು ಭೇಟಿ ಮಾಡಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿದರು.

ಈ ವೇಳೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಕಮಡೊಳ್ಳಿ, ಮುಖಂಡರಾದ ಶಿವರಾಜ ಸಜ್ಜನರ, ರಾಜಶೇಖರ ಕಟ್ಟೆಗೌಡ್ರ, ಭೋಜರಾಜ ಕರೂದಿ, ರಾಜಣ್ಣ ಗೌಳಿ, ಶಿವಕುಮಾರ ದೇಶಮುಖ, ಮಾಲತೇಶ ಸೊಪ್ಪಿನ, ಸಿದ್ಲಿಂಗಪ್ಪ ಶಂಕ್ರಿಕೊಪ್ಪ, ಕೃಷ್ಣ ಈಳಿಗೇರ ಇದ್ದರು.

ಪೂರ್ವಭಾವಿ ಸಭೆ: ಅಭಿಮಾನೋತ್ಸವಕ್ಕೆ ತೆರಳುವ ಬಗ್ಗೆ ಚರ್ಚಿಸಲು ಉದಾಸಿ ಕಲ್ಯಾಣ ಮಂಟಪದಲ್ಲಿ ಮುಖಂಡ ಬಿ.ಸಿ.ಪಾಟೀಲ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. 25 ಸಾರಿಗೆ ಬಸ್ ಮತ್ತು 100 ಕಾರುಗಳಲ್ಲಿ 5 ಸಾವಿರ ಜನ ತೆರಳಲು ತೀರ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-22-1625241398

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.