ಹಾವೇರಿ: ‘ಹಾವೇರಿ ಜಿಲ್ಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ ಕಿರುಕುಳ ಹೆಚ್ಚಾಗಿದೆ’ ಎಂದು ಶಿಗ್ಗಾವಿ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಆರೋಪಿಸಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿಗಳ ಜೊತೆಯಲ್ಲಿ ನವದೆಹಲಿಗೆ ಹೋಗಿರುವ ಪಠಾಣ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಎದುರು ಅಳಲು ತೋಡಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ವೇಣುಗೋಪಾಲ್, ಅದನ್ನು ಮುಗಿಸಿ ಕಾರಿನಲ್ಲಿ ಕುಳಿತು ವಾಪಸು ಹೊರಟಿದ್ದರು. ಕಾರಿನ ಪಕ್ಕದಲ್ಲಿ ನಿಂತು ವೇಣುಗೋಪಾಲ್ ಜೊತೆ ಮಾತನಾಡಿದ್ದ ಪಠಾಣ, ‘ಹಾವೇರಿ ಜಿಲ್ಲೆಯಿಂದ ಶಾಸಕ ಶ್ರೀನಿವಾಸ್ ಮಾನೆ ಅವರಿಗೆ ಸಚಿವ ಸ್ಥಾನ ನೀಡಿ’ ಎಂದು ಕೋರಿದ್ದಾರೆ.

‘ಸರ್. ನಾವು ಹಾವೇರಿಯಿಂದ ನಾಲ್ಕು ಜನ ಶಾಸಕರು ಒಟ್ಟಿಗೆ ಬಂದಿದ್ದೇವೆ. ಪ್ರಕಾಶಣ್ಣ (ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ) ಹಾಗೂ ಎಲ್ಲರೂ ಇದ್ದೇವೆ. ದಯವಿಟ್ಟು ಶ್ರೀನಿವಾಸ್ ಮಾನೆ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಿ. ಜಿಲ್ಲೆಯಲ್ಲಿ ಪ್ರಲ್ಹಾದ್ ಜೋಶಿ ಹಾಗೂ ಬಸವರಾಜ ಬೊಮ್ಮಾಯಿ ಅವರ ಕಿರುಕುಳ ಹೆಚ್ಚಾಗಿದೆ’ ಎಂದು ಪಠಾಣ ಅವರು ವೇಣುಗೋಪಾಲ್ ಎದುರು ದೂರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.