ತಡಸ: ಸಮೀಪದ ಯತ್ತಿನಹಳ್ಳಿ ತಾಂಡಾದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ರಜತ ಮಹೋತ್ಸವ ಸಂಭ್ರಮದಲ್ಲಿದೆ. 1997ರಲ್ಲಿ ಡಿಪಿಇಪಿ ಯೋಜನೆ ಅಡಿ 20 ಮಕ್ಕಳ ದಾಖಲಾತಿಯೊಂದಿಗೆ ಆರಂಭಗೊಂಡ ಶಾಲೆ, ಸಾವಿರಾರು ಮಕ್ಕಳಿಗೆ ಅಕ್ಷರ ಕಲಿಸಿದೆ. ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಶಿಕ್ಷಕರಲ್ಲಿ ಫಿಲೊಮಿನಾ ಬಳ್ಳಾರಿ ಮುಂಚೂಣಿಯಲ್ಲಿದ್ದಾರೆ.

ಊರಿನ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ಎಸ್ಡಿಎಂಸಿ ಅಧ್ಯಕ್ಷ ಹಾಗೂ ಸದಸ್ಯರು ಹಾಗೂ ಶಿಕ್ಷಕರ ಪರಿಶ್ರಮದೊಂದಿಗೆ ಶಾಲೆಯು ಪ್ರಗತಿಯತ್ತ ಹೆಜ್ಜೆ ಹಾಕುತ್ತಿದೆ. ಆಕರ್ಷಕ ವಾತಾವರಣ, ಗುಣಮಟ್ಟದ ಶಿಕ್ಷಣ, ಕ್ರಿಯಾಶೀಲ ಶಿಕ್ಷಕರು ನಡುವೆ 60ಕ್ಕೂ ಹೆಚ್ಚು ಮಕ್ಕಳು ಈಗ ಶಿಕ್ಷಣ ಪಡೆಯುತ್ತಿದ್ದಾರೆ.

ಹರ್ಜಪ್ಪ ಲಮಾಣಿ, ಲೋಕಪ್ಪ ಲಮಾಣಿ, ಪೂರಪ್ಪ ಲಮಾಣಿ ಹಾಗೂ ಅಶೋಕ ರಾಥೋಡ್ ಅವರ ದುಡಿಮೆಯ ಫಲವಾಗಿ ರೂಪಗೊಂಡ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ವಿವಿಧ ರಂಗಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಈಗಿರುವ ಮುಖ್ಯ ಶಿಕ್ಷಕ ನಾಗಪ್ಪ ಕೇಶಪ್ಪ ಲಮಾಣಿ ಹಾಗೂ ಸಿಬ್ಬಂದಿ ಶ್ರದ್ಧೆಯಿಂದ ಶಾಲೆ ಮುನ್ನಡೆಸುತ್ತಿದ್ದಾರೆ. ಮಕ್ಕಳ ಕನಸುಗಳಿಗೆ ದಾರಿ ತೋರಿಸುತ್ತಿದ್ದಾರೆ. ಖಾಸಗಿ ಶಾಲೆಯನ್ನು ಮೀರಿಸುವ ಪರಿಸರ ಹಾಗೂ ಕಲಿಕಾ ವಾತಾವರಣವಿದೆ.

ಎಸ್ಡಿಎಂಸಿ ಅಧ್ಯಕ್ಷ ವೆಂಕಪ್ಪ ತವರಪ್ಪ ಲಮಾಣಿ, ಶಾಲೆಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. 25 ವರ್ಷಗಳ ರಜತ ಮಹೋತ್ಸವ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಮಾ. 7ರಂದು ನಡೆಯುವ ರಜತ ಮಹೋತ್ಸವದ ವೇದಿಕೆ ಕಾರ್ಯಕ್ರಮವನ್ನು ಶಾಸಕ ರುದ್ರಪ್ಪ ಲಮಾಣಿ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಯಾಸೀರ್ ಅಹ್ಮದ್ ಖಾನ ಪಠಾಣ, ಶ್ರೀನಿವಾಸ ಮಾನೆ, ಸೈಯದ್ ಅಜ್ಜಂಪಿರ್ ಖಾದ್ರಿ, ನವೀನ್ ಪಾಟೀಲ್, ಬಿಗ್ಬಾಸ್ ರಿಯಾಲಿಟಿ ಶೋ ವಿಜೇತ ಹನುಮಂತ ಲಮಾಣಿ ಭಾಗವಹಿಸಲಿದ್ದಾರೆ. ಎಸ್ಡಿಎಂಸಿ ನಾಮಫಲಕ ಅನಾವರಣ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.