ಭಾನುವಾರ, ಆಗಸ್ಟ್ 18, 2019
22 °C

300 ಸಂತ್ರಸ್ತರ ಆರೋಗ್ಯ ತಪಾಸಣೆ

Published:
Updated:
Prajavani

ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವೈದ್ಯರ ತಂಡವು ಜಿಲ್ಲೆಯ ವಿವಿಧ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಪ್ರವಾಹ ಪೀಡಿತ ಜನರಿಗೆ ಚಿಕಿತ್ಸೆ ನೀಡಿ, ಔಷಧ ವಿತರಿಸಿದರು.

ಡಾ.ಎಸ್.ಎಸ್.ನಾಗಠಾಣ ನೇತೃತ್ವದ ತಂಡವು ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮಗಳಲ್ಲಿ ಸಂಚರಿಸಿ, ತಪಾಸಣೆ ಕೈಗೊಂಡರು. 300ಜನರಿಗೆ ಚಿಕಿತ್ಸೆ ನೀಡಿ, ಔಷಧ ವಿತರಿಸಿದರು.

ಡಾ.ವಿ.ಯು.ಸಿಂದಗಿಕರ, ಡಾ.ಸಮೀತಾ ರೆಡ್ಡಿ, ಡಾ.ಶ್ರುತಿ ಬಾಗಲಕೋಟ, ಡಾ.ಗಿರಿಜಾ ಎಚ್., ಡಾ.ಶ್ರೀದೇವಿ ಎಸ್.ಎಚ್.,ಡಾ.ಎಸ್.ಎಸ್.ದೇವರಮನಿ, ಡಾ.ಸಿದ್ದಾರ್ಥ, ಡಾ.ಅನುಷ್ಕಾ, ಡಾ.ಕೌಸರ್, ಡಾ.ಶ್ರೀಕಾಂತ, ಡಾ.ಪುನೀತ್ ಪಾಟೀಲ,ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಇದ್ದರು.

Post Comments (+)