ಗುರುವಾರ , ಡಿಸೆಂಬರ್ 5, 2019
24 °C
ರಂಗಕರ್ಮಿ ಎಂ.ವಿ.ಪ್ರತಿಭಾ

‘ಹೊಂಟೋಗ್ಬಿಟ್ಳು‘ ಮ್ಯೂಸಿಕ್ ಆಲ್ಬಂ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ‘ದೃಶ್ಯಮಾಧ್ಯಮ ಅತ್ಯಂತ ಶಕ್ತಿಯುತವಾಗಿದ್ದು, ಇದರ ತಂತ್ರಜ್ಞಾನ, ವ್ಯಾಕರಣದ ಬಗ್ಗೆ ಯುವಜನತೆ ಪರಿಣತಿ ಗಳಿಸಿದರೆ ಈ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬಹುದು’ ಎಂದು ರಂಗಕರ್ಮಿ ಎಂ.ವಿ.ಪ್ರತಿಭಾ ಹೇಳಿದರು.

ಇಲ್ಲಿಯ ಶಿವಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಈಚೆಗೆ ಸಂಕಲ್ಪ ಕ್ರಿಯೇಶನ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ಯುವ ಪ್ರತಿಭೆಗಳು ಹೊರ ತಂದಿರುವ ‘ಹೊಂಟೋಗ್ಬಿಟ್ಳು’ ಮ್ಯೂಸಿಕ್ ಆಲ್ಬಂ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಂಕಲ್ಪ ಕ್ರಿಯೇಶನ್ ಸಂಸ್ಥೆಯ ಪ್ರಮುಖ ಮನು ಮಾಸೂರು ಮಾತನಾಡಿ, ‘ಈ ಭಾಗದ ಸುತ್ತಲಿನ ಯುವಕ ಯುವತಿಯರು ಸೇರಿ ಹೊರತಂದಿರುವ ಪ್ರಥಮ ಮ್ಯೂಸಿಕ್ ಆಲ್ಬಂ ಇದು. ಈಗಾಗಲೇ ಯೂಟ್ಯೂಬ್‍ನಲ್ಲಿ 16 ಸಾವಿರಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳಲು ಹುಮ್ಮಸ್ಸು ಒದಗಿಸಿದೆ’ ಎಂದರು.

ಸ್ಟೈಲ್ ಡಾನ್ಸ್ ಅಕಾಡೆಮಿ ಸಂಸ್ಥಾಪಕ ಸೂರಜ್ ಸಾಗರ್, ಅರವಿಂದ ಶೆಟ್ಟಿ, ಗಣೇಶ್ ಆಚಾರ್ಯ, ಪವನ್ ಸಾಗರ್, ಮನೋಜ್, ಅನಘಾ, ಪವನ್ ಮಾಸೂರು, ವರುಣ್, ಭರತ್, ದಿನು ಸಾಗರ್ ಇದ್ದರು.

ಪ್ರತಿಕ್ರಿಯಿಸಿ (+)