ಸೋಮವಾರ, ಡಿಸೆಂಬರ್ 16, 2019
24 °C

ಹೊಸಗುಂದ ಸಾಂತರಸರ ವೀರಗಲ್ಲು ಶಾಸನ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ತಾಲ್ಲೂಕಿನ ಮಲೆಶಂಕರ ದೇವಸ್ಥಾನದ ಮುಂಭಾಗದಲ್ಲಿ ಈಚೆಗೆ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಆರ್. ಶೇಜೇಶ್ವರ ಕ್ಷೇತ್ರ ಕಾರ್ಯ ಕೈಗೊಂಡಾಗ ಹೊಸಗುಂದ ಸಾಂತರಸರ ವೀರಗಲ್ಲು ಶಾಸನ ಪತ್ತೆಯಾಗಿದೆ.

ಈ ಶಾಸನ ಒಂಬತ್ತು ಹಳೆಗನ್ನಡ ಲಿಪಿಯಿಂದ ಕೂಡಿದ್ದು, ಅಲ್ಲಲ್ಲಿ ಹಾಳಾಗಿದೆ. ಈ ಶಾಸನದಲ್ಲಿ ಹೊಸಗುಂದದ ಸಾಂತರಸರು ಬಿಲ್ಲೇಶ್ವರ ದೇವರ ಆರಾಧಕರು ಎಂದು ಉಲ್ಲೇಖಿಸಲಾಗಿದೆ.

ಸಾನ್ತರಾದಿತ್ಯನ ವಂಶದವರಾದ ಮಂಡಳಿಕರಾದ ಇವರು ಹೊಸಗುಂದ ನಾಡಿನಲ್ಲಿ ಆಳ್ವಿಕೆ ಮಾಡುವಾಗ ಊರಿನ ನಾಯಕ ಹೆಗ್ಗಡೆಯು ಶತ್ರುಗಳ ವಿರುದ್ಧ ಹೋರಾಡಿ ವೀರ ಮರಣ ಹೊಂದಿರುವುದನ್ನು ತಿಳಿಸುತ್ತದೆ.

ವೀರಗಲ್ಲಿನ ಮಹತ್ವ: ಈ ವೀರಗಲ್ಲು ಶಾಸನವು ಹೊಸಗುಂದ ಸಾಂತರಸರ ಕ್ರಿ.ಶ.12–13ನೇ ಶತಮಾನದ್ದಾಗಿದೆ. ಇದು ತುಂಡಾಗಿದ್ದು, ಐದು ಪಟ್ಟಿಕೆಗಳಿಂದ ಕೂಡಿದೆ. 

ಪ್ರತಿಕ್ರಿಯಿಸಿ (+)