ಹುಲಿಕಲ್ ಘಾಟಿ ಸಂಚಾರ ಅಸ್ತವ್ಯಸ್ತ

7
ಶಿರಾಡಿ ಘಾಟಿ ಬಂದ್ ಕಾರಣ ಹೆಚ್ಚಿದ ವಾಹನ ದಟ್ಟಣೆ

ಹುಲಿಕಲ್ ಘಾಟಿ ಸಂಚಾರ ಅಸ್ತವ್ಯಸ್ತ

Published:
Updated:
Deccan Herald

ಹೊಸನಗರ: ತಾಲ್ಲೂಕಿನಾದ್ಯಂತ ಶನಿವಾರ ಬೆಳಿಗ್ಗೆ ಮಳೆಯ ಪ್ರಮಾಣ ಇಳಿಮುಖ ಆಗಿದ್ದರೂ, ಮಧ್ಯಾಹ್ನದ ಹೊತ್ತಿಗೆ ಮತ್ತೆ ಮಳೆ ಆರಂಭವಾಗಿದೆ.

ದಟ್ಟವಾದ ಮಂಜು ಹಾಗೂ ಮಳೆಯ ಪರಿಣಾಮ ಶುಕ್ರವಾರ ರಾತ್ರಿ 1 ಗಂಟೆಗೆ ಎರಡು ದೊಡ್ಡ ಲಾರಿಗಳು ಹುಲಿಕಲ್ ಘಾಟಿಯ ಹೊಸನಗರ ತಾಲ್ಲೂಕು ಗಡಿ ಭಾಗದಲ್ಲಿ ಒಂದೇ ಸ್ಥಳದಲ್ಲಿ ಕೆಟ್ಟು ನಿಂತ ಕಾರಣ ಸಂಚಾರ ಸ್ಥಗಿತಗೊಂಡಿದೆ.

ಶಿರಾಡಿ ಘಾಟಿ ಬಂದ್ ಆದ ಕಾರಣ 20 ಚಕ್ರದ ಲಾರಿಗಳು ಹುಲಿಕಲ್ ಘಾಟಿಯಲ್ಲಿ ಸಂಚರಿಸುತ್ತಿದೆ. ವಾಹನ ಸಂಚಾರದ ದಟ್ಟಣೆ ಹೆಚ್ಚಾಗಿದೆ.

ಮಳೆ ಹಾನಿ: ತಾಲ್ಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓತನಾಡಿ ಎಂಬಲ್ಲಿ ಭಾಸ್ಕರ ಭಟ್ ಹಾಗೂ ಮಂಜುನಾಥ ಭಟ್ ಎಂಬುವವರ ಅಡಿಕ ತೋಟದ ಮೇಲೆ ಧರೆ ಸಹಿತ ಮರ ಬಿದ್ದ ಕಾರಣ 25ಕ್ಕೂ ಹೆಚ್ಚು ಅಡಿಕೆ ಮರಗಳಿಗೆ ಹಾನಿ ಆಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದ್ದಾರೆ.

ತಾಲ್ಲೂಕಿನ ಸುಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ತಿಗಾ ಗ್ರಾಮದ ಬಲೆಗೋಡು ಎಂಬಲ್ಲಿ ನಾಗರಾಜ ಗೌಡ ಎಂಬುವವರ ಸುಮಾರು ₹ 30 ಸಾವಿರ ಬೆಲೆ ಬಾಳುವ ಹೂಟಿ ಕೋಣ ವಾರಾಹಿ ನದಿಯಲ್ಲಿ ತೇಲಿ ಹೋಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಶೋಭಾ ಮಂಜುನಾಥ ತಿಳಿಸಿದ್ದಾರೆ.

ಮಳೆ ಪ್ರಮಾಣ: ಶನಿವಾರ ಬೆಳಿಗ್ಗೆ 8.30ರ ಪ್ರಕಾರ ಮಾಣಿ ಅಣೆಕಟ್ಟಿನ ನೀರಿನ ಎತ್ತರ 593.46 ಮೀ, ಚಕ್ರಾ ಅಣೆಕಟ್ಟು: 573.46 ಮೀಟರ್, ಸಾವೆಹಕ್ಕಲು ಅಣೆಕಟ್ಟಿನ ನೀರಿನ ಮಟ್ಟ 580.56 ಮೀಟರ್ ಇದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !